ಬಿಎಸ್‌ಎನ್‌ಎಲ್ 2023-24ರಿಂದ ಲಾಭಕ್ಕೆ ಬರಬಹುದು: ಸಂಸದೀಯ ಸಮಿತಿ ವರದಿ

ಚಿತ್ರಕೃಪೆ-ಇಂಟರ್ನೆಟ್‌

ನಷ್ಟದಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ 2023-24ರ ಆರ್ಥಿಕ ವರ್ಷದಿಂದ ಲಾಭಕ್ಕೆ ಬರಬಹುದು ಎಂದು ಸಂಸತ್ತಿನ ಸಮಿತಿ ವರದಿ ತಿಳಿಸಿದೆ.
ಬಿಎಸ್‌ಎನಲ್ ಪುನರುಜ್ಜೀವನ ಯೋಜನೆಗಳು ಮತ್ತು ಕಾರ್ಯತಂತ್ರಗಳ ಹೊರತಾಗಿಯೂ ಅದು ಬೆಳವಣಿಗೆ ಸಾಧಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈಗಾಗಲೇ ಸಾರ್ವಜನಿಕ ವಲಯದ ಕಾರ್ಯಾಚರಣೆಯಲ್ಲಿ ಅದು ಲಾಭದಾಯಕ ಸ್ಥಿತಿಗೆ ಬಂದಿದೆ ಎಂದು ವರದಿ ಹೇಳಿದ್ದು, ಬಿಎಸ್ಎನ್ಎಲ್ 2023-24 ರಿಂದ ಲಾಭಕ್ಕೆ ಬರಬಹುದು ಎಂದು ನಿರೀಕ್ಷಿಸಿದೆ.
ಇದು ಸೇವೆಗಳ ಆದಾಯ ಮತ್ತು ಹಣದ ಹರಿವಿನ ಸಂಪೂರ್ಣ ಕಾರ್ಯಾಚರಣೆಗೆ ಒಳಪಟ್ಟಿರುತ್ತದೆ. ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್‌ಎಸ್) ಕೂಡ ಇದರ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಅಲ್ಲದೆ, ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಾಗಿ 2019ರ ಅಕ್ಟೋಬರ್‌ನಲ್ಲಿ 4 ಜಿ ಸ್ಪೆಕ್ಟ್ರಮ್‌ಗೆ ಬೆಂಬಲ, ಸಾರ್ವಜನಿಕ ವಲಯದಿಂದ ಸಂಗ್ರಹಿಸಬೇಕಾದ ಬಾಂಡ್‌ಗಳಿಗೆ ಸವರಿನ್ ಗ್ಯಾರಂಟಿ ಸೇರಿದಂತೆ ಸರ್ಕಾರ ಪುನರುಜ್ಜೀವನ ಪ್ಯಾಕೇಜ್ ಅನುಮೋದಿಸಿತ್ತು. ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ ವಿಲೀನಗೊಳಿಸುವುದು ಇದರಲ್ಲಿ ಸೇರಿದೆ.
ಸಂಸತ್ತಿನ ಸಮಿತಿ ವರದಿ ವರದಿಯ ಪ್ರಕಾರ, ಬಿಎಸ್‌ಎನ್‌ಎಲ್‌ನ ವೆಚ್ಚವು ವಾರ್ಷಿಕವಾಗಿ 34,400 ಕೋಟಿಯಿಂದ 24,687 ಕೋಟಿ ರೂಪಾಯಿಗೆ ಇಳಿದಿದೆ. ವಿಆರ್‌ಎಸ್‌ ಅಡಿ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ನ 92,956 ಉದ್ಯೋಗಿಗಳು 2020 ರ ಜನವರಿ 31ರಂದು ನಿವೃತ್ತರಾಗಿದ್ದಾರೆ. ಕಳೆದ ಒಂಭತ್ತು ತಿಂಗಳ ಅಂಕಿಅಂಶಗಳ ಪ್ರಕಾರ ವಾರ್ಷಿಕ ಮೌಲ್ಯದಲ್ಲಿ ನೌಕರರ ವೆಚ್ಚದಲ್ಲಿ ಉಳಿತಾಯವಾಗಿದೆ ಎಂದು ತಿಳಿಸಿದೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

ಆಧಾರ:  goodreturns.in

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement