ಬಳ್ಳಾರಿಗೂ ಬಂತು ಆಫ್ರಿಕಾ ರೂಪಾಂತರಿ ಕೊರೊನಾ..!

ಬಳ್ಳಾರಿ : ದುಬೈನಿಂದ ಬಳ್ಳಾರಿಗೆ ಬಂದ ಇಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಒಬ್ಬರಿಗೆ  ಆಫ್ರಿಕಾ ರೂಪಾಂತರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಪವನಕುಮಾರ ಜೈನ್‌ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಪವನ್‌ಕುಮಾರ್ ಜೈನ್, ದುಬೈನಿಂದ
ಈ ಇಬ್ಬರು ವ್ಯಕ್ತಿಗಳು ಬೆಂಗಳೂರಿಗೆ ಬಂದ ವೇಳೆ ಅವರಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಕೆಲ ದಿನಗಳ ಬಳಿಕ ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದರಿಂದ ಅವರನ್ನು ಹೆಚ್ಚಿನ ತಪಾಸಣೆಗೊಳಪಡಿಸಿದಾಗ ಕೊರೋನಾ ದೃಢಪಟ್ಟಿದೆ ಎಂದರು.
ಬೆಂಗಳೂರಿನಿಂದ ಬಂದ ವರದಿಯಲ್ಲಿ ಒಬ್ಬರಲ್ಲಿ ಆಫ್ರಿಕನ್ ರೂಪಾಂತರಿ ಕೊರೊನಾವಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಐಸೋಲೇಷನ್‌ ಮಾಡಲಾಗಿದೆ. ಅವರ ಜೊತೆ ಸಂಪರ್ಕವಿರಿಸಿಕೊಂಡಿದ್ದ ವ್ಯಕ್ತಿಗಳನ್ನೂ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಜನರು ಈ ಬಗ್ಗೆ ಎಚ್ಚರವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆಯಲ್ಲೂ ವ್ಯಕ್ತಿಯೊಬ್ಬರಿಗೆ ದಕ್ಷಿಣ ಆಫ್ರಿಕಾ ಸೋಂಕು ತಗುಲಿತ್ತು ಎಂದು ಹೇಳಲಾಗಿತ್ತು. ಆದರೆ ಶುಕ್ರವಾರ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಿವಮೊಗ್ಗದ ವ್ಯಕ್ತಿಗೆ ಆಫ್ರಿಕಾದ ರೂಪಾಂತರಿ ಕೊರೊನಾ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು ಹಾಗೂ ಸಂಪರ್ಕದಲ್ಲಿದ್ದ ಜನರಿಗೆ ಕೊರೊನಾ ಇಲ್ಲ ಎಂದು ಹೇಳಿದ್ದರು.ಈಗ ದುಬೈನಿಂದ ಬಂದಿದ್ದ ಬಳ್ಳಾರಿ ವ್ಯಕ್ತಿಗೆ ಆಫ್ರಿಕಾದ ರೂಪಾಂತರಿ ಕೊರೊನಾ ತಗುಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿಗೆ ಪೂರ್ಣ ಬಹುಮತ ; ಪೀಪಲ್ಸ್ ಪಲ್ಸ್ ಸಮೀಕ್ಷೆಯಲ್ಲಿ ಬಹಿರಂಗ....

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement