
ವಾಷಿಂಗ್ಟನ್: ಬೃಹತ್ ಕ್ಷುದ್ರಗ್ರಹವೊಂದು ಮಾರ್ಚ್ 21ರಂದು ಭೂಮಿಯ ಪಕ್ಕದಲ್ಲಿಯೇ ಹಾದು ಹೋಗಲಿದೆ. ಇದು ಈ ವರ್ಷ ಭೂಮಿಯ ಸಮೀಪ ಬರಲಿರುವ ಅತಿ ದೊಡ್ಡ ಕ್ಷುದ್ರಗ್ರಹವಾಗಿದೆ ಎಂದು ನಾಸಾ ಹೇಳಿದೆ.
ಈ ಕ್ಷುದ್ರಗ್ರಹವು ಭೂಮಂಡಲದಿಂದ 1.25 ಮಿಲಿಯನ್ ಮೈಲು (ಎರಡು ಮಿಲಿಯನ್ ಕಿಮೀ) ದೂರದಲ್ಲಿ ಸಾಗಲಿದೆ ಎಂದು ತಿಳಿಸಿರುವ ನಾಸಾ
ಅಪರೂಪದ ಕ್ಷುದ್ರಗ್ರಹ ನೋಡಲು ಖಗೋಳ ವೀಕ್ಷಕರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದೆ.
2001 F032 ಎಂಬ ಹೆಸರಿನ ಈ ಕ್ಷುದ್ರಗ್ರಹ 20 ವರ್ಷದ ಹಿಂದೆ ಪತ್ತೆಯಾಗಿತ್ತು. ಇದು ಭೂಮಿಯ 1.25 ಮಿಲಿಯನ್ ಮೈಲು ಸಮೀಪಕ್ಕಿಂತ ಇನ್ನೂ ಹತ್ತಿರ ಬರುವುದಿಲ್ಲ ಎಂದು ನಾಸಾ ಅರ್ಥ್ ಆಬ್ಜೆಕ್ಟ್ ಸ್ಟಡೀಸ್ ಕೇಂದ್ರದ ನಿರ್ದೇಶಕ ಪೌಲ್ ಚೊಡಾಸ್ ಹೇಳಿದ್ದಾರೆ.
ಭೂಮಿಯೊಂದಿಗೆ ಮುಖಾಮುಖಿಯಾಗುವ ಬಹುತೇಕ ಕ್ಷುದ್ರಗ್ರಹಗಳ ವೇಗಕ್ಕಿಂತ ಇದರ ವೇಗ ಹೆಚ್ಚು, ಗಂಟೆಗೆ 77 ಸಾವಿರ ಮೈಲು ವೇಗದಲ್ಲಿಈ ಕ್ಷುದ್ರ ಗ್ರಹ ಭೂಮಿ ಸಮೀಪ ಹಾದುಹೋಗಲಿದ್ದು, ಇದರ ಗಾತ್ರ ಹಾಗೂ ಅದರ ಹೊರಮೈನಲ್ಲಿ ಪ್ರತಿಫಲನವಾಗುವ ಬೆಳಕಿನ ಅಧ್ಯಯನ ಮಾಡುವ ಮೂಲಕ ಅದರ ಸಂಯೋಜನೆಯ ಬಗ್ಗೆ ಅಂದಾಜು ಮಾಡಬಹುದು ಎಂದು ಹೇಳಿದೆ.
‘
ನಿಮ್ಮ ಕಾಮೆಂಟ್ ಬರೆಯಿರಿ