ಹಿರೆನ್ ನಿಗೂಢ ಸಾವಿನ ಪ್ರಕರಣ: ನಿ‌ರೀಕ್ಷಣಾ ಜಾಮೀನಿಗೆ ಥಾಣೆ ಕೋರ್ಟಿಗೆ ಅರ್ಜಿ ಸಲ್ಲಿಸಿದ ಸಚಿನ್‌ ವಾಝೆ

ಮುಂಬೈ; ಮನ್ಸುಖ್ ಹಿರೆನ್ ಸಾವಿನ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿ ಬಂದ ನಂತರ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಥಾಣೆಯ ಸೆಷನ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಹಿರೆನ್‌ ಪ್ರಕರಣದಲ್ಲಿ ಆರೋಪ ಕೇಳಿ ಬಂದ ನಂತರ ಅಪರಾಧ ಗುಪ್ತಚರ ಘಟಕದಲ್ಲಿ (ಸಿಐಯು) ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಸಚಿನ್ ವಾಝೆ ಅವರನ್ನು ಮುಂಬೈ ಪೊಲೀಸ್ ಪ್ರಧಾನ ಕಚೇರಿಯಲ್ಲಿನ ನಾಗರಿಕ ಸೌಲಭ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು.
ಥಾಣೆ ಸೆಷನ್‌ ನ್ಯಾಯಾಲಯದಲ್ಲಿ ಈ ವಿಷಯವು ಮಾರ್ಚ್ 12 ರಂದು ವಿಚಾರಣೆಗೆ ಬಂದಿತು, ಆದರೆ ನ್ಯಾಯಾಲಯವು ವಾಝೆ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತು. ಮಾರ್ಚ್ 19 ರಂದು ಇದು ವಿಚಾರಣೆ ಬರಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮನೆಯ ಹೊರಗೆ ಸ್ಫೋಟಕ ವಸ್ತುಗಳನ್ನು ಹೊಂದಿದ್ದ ವಾಹನದ ಮಾಲೀಕ ಹಿರೆನ್ ಮಾರ್ಚ್ 5 ರಂದು ಥಾಣೆಯಲ್ಲಿ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ಹಿರೆನ್‌ ಪತ್ನಿ ವಾಝೆ ವಿರುದ್ಧ ಆರೋಪ ಮಾಡಿದ್ದರು. ನಂತರ, ಅಪರಾಧ ಗುಪ್ತಚರ ಘಟಕದಲ್ಲಿ (ಸಿಐಯು) ಹಿರೆನ್ ಸಾವಿನ ತನಿಖಾಧಿಕಾರಿಯಾಗಿದ್ದ ವಾಝೆ ಅವರನ್ನು ಮುಂಬೈ ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ನಾಗರಿಕ ಸೌಲಭ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಜಯಲಲಿತಾ ಜನ್ಮದಿನವನ್ನು ವಿಶಿಷ್ಟ ಶೈಲಿಯಲ್ಲಿ ಆಚರಿಸಿದ ಎಐಎಡಿಎಂಕೆ : ಅವರ ಎಐ ರಚಿತ ಧ್ವನಿ ಕ್ಲಿಪ್ ಬಿಡುಗಡೆ | ಆಲಿಸಿ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement