ಅಮೆರಿಕ ವಿಸಾ ನೀತಿ ಮರುಪರಿಷ್ಕರಣೆ

ವಾಷಿಂಗ್ಟನ್;ಅಮೆರಿಕಾರದಲ್ಲಿ ಕೆಲಸ ಮಾಡುವ ಲಕ್ಷಾಂತರ ವಿದೇಶಿ ವೃತ್ತಿಪರ ನೌಕರರಿಗೆ ಅನುಕೂಲವಾಗುವಂತೆ ಎಚ್-1ಬಿ ವಿಸಾ ನೀತಿ ಮರುಪರಿಷ್ಕರಣೆ ಮಾಡುವುದಾಗಿ ಜೋ ಬೈಡೆನ್ ಸರ್ಕಾರ ತಿಳಿಸಿದೆ.
ಹಿಂದಿನ ಟ್ರಂಪ್ ಆಡಳಿತದಲ್ಲಿ ರದ್ದುಗೊಂಡಿದ್ದ ಮೂರು ನಿಯಮಗಳನ್ನು ಮರು ಜಾರಿಗೊಳಿಸಲಾಗುತ್ತಿದೆ. ಇದರಿಂದ ಬಿಗಿಗೊಳಿಸಲಾಗಿರುವ ವಿಸಾ ನೀತಿ ಸಡಿಲಗೊಂಡಿದೆ ಎಂದು ಶ್ವೇತ ಭವನ ಹೇಳಿದೆ.
ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳ (ಯುಎಸ್‍ಸಿಐಎಸ್) ವಿಭಾಗವೂ ಫಾರಂ ಐ-129ಗಳನ್ನು ಪುನರ್ ಪರಿಶೀಲನೆ ಆರಂಭಿಸಿದೆ. ಶುಕ್ರವಾರದಿಂದ ಮರು ಪರಿಶೀಲನೆ ಆರಂಭಿಸಿರುವ ಅಮೆರಿಕಾ ಸರ್ಕಾರ ಅವಧಿ ಮುಗಿಯುವ ಮುನ್ನಾ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು 30 ದಿನಗಳ ಒಳಗೆ ಅಂಗೀಕರಿಸುವ ಅಥವಾ ಮರು ಪರಿಶೀಲಿಸುವ ಭರವಸೆಯನ್ನು ನೀಡಿದೆ.ಅಮೆರಿಕದ ಈ ನಿರ್ಧಾರದಿಂದ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಮಂದಿಗೆ ಅಲ್ಲಿ ವೃತ್ತಿ ಮುಂದುವರಿಸಲು ಮತ್ತು ಅಲ್ಲಿನ ಪೌರತ್ವ ಪಡೆಯಲು ಅನುಕೂಲವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement