ವಕೀಲರ ಸಲಹೆಯಂತೆ ದೂರು ನೀಡಿದ್ದೇನೆ, ಕೊನೆ ವರೆಗೂ ಬಿಡಲ್ಲ

ಬೆಂಗಳೂರು: ನಾನು ಅಧಿಕೃತವಾಗಿ ದೂರು ಕೊಟ್ಟಿದ್ದೇನೆ. ವಕೀಲರು ಮಾಧ್ಯಮಗಳೆದುರು ಬರದಂತೆ ತಿಳಿಸಿದ್ದರೂ ನೀವೆಲ್ಲರೂ ಕಾಯುತ್ತಿರುವ ಕಾರಣ ಬಂದು ಹೇಳಿಕೆ ಕೊಡುತ್ತಿದ್ದೇನೆ. ವಕೀಲರ ಸಲಹೆ ಪಡೆದ ನಂತರ ದೂರು ನೀಡಿದ್ದೇನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.
ದೂರು ದಾಖಲಾದ ಪ್ರತಿ ನನಗೆ ಸಿಕ್ಕಿದೆ. ನಕಲಿ ಸಿಡಿ ಸಂಬಂಧ ನಾನು ದೂರು ನೀಡಿದ್ದೇನೆ. ಇಲ್ಲಿ ಮಹಾನಾಯಕರು, ಸಣ್ಣ ನಾಯಕರು ಎಂಬುದು ಮುಖ್ಯವಾಗುವುದಿಲ್ಲ. ಕಾನೂನು ಯಾರನ್ನೂ ಬಿಡುವುದಿಲ್ಲ. ಈ ರೀತಿ ಬೋಗಸ್ ಸಿಡಿ ತಂದು ಬ್ಲ್ಯಾಕ್‌ ಮೇಲ್‌ ‌ಮಾಡುವುದನ್ನು ನಿಲ್ಲಿಸಬೇಕಿದೆ. ನಾನು ಕಾನೂನು ತಜ್ಞನಲ್ಲ. ಆದ್ದರಿಂದ ವಕೀಲರ ಸಲಹೆ ಪಡೆದು ದೂರು ನೀಡಿದ್ದೇನೆ ಎಂದ ಅವರು, ದೂರಿನಲ್ಲಿ ನಾನು ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಕಾನೂನು ಪ್ರಕಾರ ನಾನು ಹೆಸರು ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಬಳಿ ಯಾವುದೇ ತನಿಖಾ ಪ್ರಶ್ನೆ ಕೇಳಬೇಡಿ. ನಾನು ಕಾನೂನು ಪಂಡಿತನಲ್ಲ, ನಾನೊಬ್ಬ ರಾಜಕಾರಣಿ. ಈ ವಿಷಯದಲ್ಲಿ ವಕೀಲರು ಹಾಗೂ ಪೊಲೀಸರು ತನಿಖೆ ಬಗ್ಗೆ ನೋಡಿಕೊಳ್ಳುತ್ತಾರೆ. ಸಿಡಿ ವಿಷಯದಲ್ಲಿ ನಾನು ಕೊನೆ ವರೆಗೂ ಬಿಡುವುದಿಲ್ಲ. ನಾನು ಕಾನೂನು ಪ್ರಕಾರವೇ ಮುಂದುವರಿಯುತ್ತೇನೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement