2022ರ ಏಪ್ರಿಲ್ 1ರ ನಂತರ ಹಳೆ ವಾಹನಗಳ ನೋಂದಣಿ ಮಾಡುವಂತಿಲ್ಲ

ಚಿತ್ರ ಕೃಪೆ-ಇಂಟರ್ನೆಟ್

ರಾಜ್ಯ ಸಾರಿಗೆ ಸಂಸ್ಥೆ ಒಡೆತನದ ಬಸ್ʼಗಳು ಸೇರಿದಂತೆ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳನ್ನ 2022ರ ಏಪ್ರಿಲ್ 1ರ ನಂತರ ನೋಂದಾಣಿ ಮಾಡುವಂತಿಲ್ಲ ಎಂದು ಕರಡು ಅಧಿಸೂಚನೆಗೆ ಕೇಂದ್ರ  ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಒಪ್ಪಿಗೆ ಸೂಚಿಸಿದೆ.
ಹೊಸ ನಿಯಮಗಳನ್ನ ಪರಾಮರ್ಶಿಸಿ ತಿದ್ದುಪಡಿಗಳನ್ನ ಮಾಡಲು ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಸಚಿವಾಲಯ ಹುಡುಕುತ್ತಿದ್ದು, ಈ ಸಂಬಂಧ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 12ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಅಧಿಸೂಚನೆ ಹೊರಡಿದ 30 ದಿನಗಳ ಒಳಗೆ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಸಲ್ಲಿಸಬೇಕಾಗಿದೆ.
ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ʼ ಭಾಗವಾಗಿ ಸರ್ಕಾರ ಹೊಸ ವಾಹನಗಳ ಸ್ಕ್ರ್ಯಾಪ್ ಪೇಡ್ ನೀತಿ ಮಂಡಿಸಿದ ನಂತರ ಈ ಹೊಸ ಅಧಿಸೂಚನೆ ಹೊರಬಿದ್ದಿದೆ. ಹೊಸ ಸ್ಕ್ರಾಪ್ ನೀತಿ ಪ್ರಕಾರ ಖಾಸಗಿ ವಾಹನಗಳು 20 ವರ್ಷಗಳ ನಂತರ ಫಿಟ್ ನೆಸ್ ಟೆಸ್ಟ್ʼಗೆ ಒಳಗಾಗಬೇಕಾಗುತ್ತದೆ. ವಾಣಿಜ್ಯ ವಾಹನಗಳು 15 ವರ್ಷಗಳನ್ನು ಪೂರೈಸಿದ ನಂತರ ಅದನ್ನ ಮಾಡಬೇಕಾಗುತ್ತದೆ.
ಕರಡಿ ಅಧಿಸೂಚನೆಯಂತೆ 15 ವರ್ಷಗಳ ಮೇಲ್ಪಟ್ಟ ಕೇಂದ್ರ ಸರ್ಕಾರ ಮತ್ತು ಅದರ ಇಲಾಖೆಗಳು, ರಾಜ್ಯ ಸರ್ಕಾರ ಮತ್ತು ಅದರ ಇಲಾಖೆಗಳು, ರಾಜ್ಯ ಸಾರಿಗೆ ಸಂಸ್ಥೆಗಳು, ಸಾರ್ವಜನಿಕ ವಲಯದ ಘಟಕಗಳು ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದೊಂದಿಗಿನ ಸ್ವಾಯತ್ತ ಸಂಸ್ಥೆಗಳು, ಸ್ಥಳೀಯ ಸರ್ಕಾರಗಳಾದ ಪುರಸಭೆಗಳು ಮತ್ತು ಪಂಚಾಯಿತಿಗಳ ಒಡೆತನದ ಮೋಟಾರು ವಾಹನಗಳ ನೋಂದಣಿ ಪ್ರಮಾಣಪತ್ರ ನವೀಕರಿಸದಿರುವುದು ಪ್ರಸ್ತಾವನೆಯಲ್ಲಿದೆ.

ಪ್ರಮುಖ ಸುದ್ದಿ :-   ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ ; ಶುಭಮನ್ ಗಿಲ್ ನೂತನ ನಾಯಕ

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement