ನಾನು ಗಾಯಗೊಂಡ ಹುಲಿ: ಪ್ರಚಾರ ಸಭೆಯಲ್ಲಿ ಗುಡುಗಿದ ಮಮತಾ

ಕೊಲ್ಕತ್ತಾ: ನಾನು ಗಾಯಗೊಂಡ ಹುಲಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭಾನುವಾರ ಕೊಲ್ಕತ್ತಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಗಾಲಿಕುರ್ಚಿಯಲ್ಲಿಯೇ ಕುಳಿತು ಪ್ರಚಾರ ಭಾಷಣ ಮಾಡಿದ ಅವರು, ಯಾವುದೇ ಸಂಚು ನಡೆದರೂ ನಾನು ತಲೆ ಬಾಗುವುದಿಲ್ಲ ಎಂದು ಹೇಳಿದ್ದಾರೆ.
ನನಗೆ ಗಾಯಗಳಾಗಿವೆ. ಆರೋಗ್ಯ ಸರಿಯಿಲ್ಲ. ಆದರೆ ನನ್ನ ಗುರಿ ಬದಲಾಗಿಲ್ಲ. 15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದಾರೆ. ಆದರೆ ನಾನು ಗಾಲಿಕುರ್ಚಿಯಿಂದಲೇ ಇಡೀ ಬಂಗಾಳ ಸುತ್ತುವೆ. ನಾನು ವಿಶ್ರಾಂತಿ ತೆಗೆದುಕೊಂಡರೆ ಬಂಗಾಳದ ಜನರನ್ನು ತಲುಪುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಕಾಲಿಗೆ ಬ್ಯಾಂಡೇಜ್ ಸುತ್ತಿದ್ದ ಮಮತಾ ತಮ್ಮ ನಿವಾಸ ಕಾಳಿಘಾಟಿನಿಂದ ಮಯೋ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಿ ಅಲ್ಲಿಂದ ನಂದಿಗ್ರಾಮ ಹುತಾತ್ಮರ ದಿನದ ಅಂಗವಾಗಿ ನಡೆಯುವ ಟಿಎಂಸಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ. 2007ರಲ್ಲಿ ನಂದಿಗ್ರಾಮದಲ್ಲಿ ಭೂ ಸ್ವಾಧೀನ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು 14 ಮಂದಿ ಹುತಾತ್ಮರಾಗಿದ್ದರು.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇವರ ವಿರುದ್ಧ ಒಂದು ಕಾಲದಲ್ಲಿ ಮಮತಾ ಒಡನಾಡಿಯಾಗಿದ್ದ, ಈಗ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಕಣಕ್ಕಿಳಿದಿದ್ದಾರೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement