ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರೂ ನಾನ್ ವೆಜ್ ಪಿಜ್ಜಾ ಸರಬರಾಜು ಮಾಡಿದ್ದಕ್ಕಾಗಿ ಮಹಿಳೆ ೧ ಕೋಟಿ ರೂ. ಪರಿಹಾರ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ.
ಗಾಜಿಯಾಬಾದ್‌ನಲ್ಲಿನ ಸಸ್ಯಾಹಾರ ಸೇವನೆ ಮಾಡುವ ಮಹಿಳೆ ದೀಪಾಲಿ ತ್ಯಾಗಿ ಅಮೆರಿಕದ ರೆಸ್ಟೋರೆಂಟ್‌ನಿಂದ ಸಸ್ಯಾಹಾರಿ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಆದರೆ ರೆಸ್ಟೊರೆಂಟ್‌ನವರು ಮಾಂಸಾಹಾರಿ ಪಿಜ್ಜಾವನ್ನು ನೀಡಿದ್ದಾರೆ. ದೀಪಾಲಿ ಪಿಜ್ಜಾ ತಿನ್ನುವಾಗ ಅದು ಮಾಂಸಾಹಾರಿ ಎಂಬುದು ಅರಿವಿಗೆ ಬಂದಿದೆ. ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ. ಸಸ್ಯಾಹಾರಿಯಾದ ತನಗೆ ಮಾಂಸಾಹಾರ ಸೇವಿಸುವಂತೆ ಮಾಡಿದ್ದಕ್ಕಾಗಿ ೧ ಕೋಟಿ ಪರಿಹಾರ ನೀಡಬೇಕೆಂದು ಅವರು ದೂರು ದಾಖಲಿಸಿದ್ದಾರೆ.
ಪಿಜ್ಜಾದಲ್ಲಿ ಮಶ್ರೂಮ್ ಬದಲಿಗೆ ಮಾಂಸದ ತುಂಡುಗಳಿವೆ ಎಂಬುದು ದೀಪಾಲಿಗೆ ಗೊತ್ತಾಗಿದೆ. ದೀಪಾಲಿ ತಕ್ಷಣವೇ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ, ಸಸ್ಯಾಹಾರಿಗಳ ಮನೆಯಲ್ಲಿ ನಾನ್‌ವೆಜ್ ಪಿಜ್ಜಾ ನೀಡಲಾಗಿದ್ದನ್ನು ಆಕ್ಷೇಪಿಸಿದ್ದಾರೆ. ದೀಪಾಲಿ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರಿಂದ ನನ್ನ ಧಾರ್ಮಿಕ ಆಚರಣೆಗೆ ತೊಂದರೆಯಾಗಿದೆ. ಇದರ ಪರಿಹಾರಕ್ಕಾಗಿ ದೀರ್ಘ ಕಾಲದ ಹಾಗೂ ದುಬಾರಿ ಆಚರಣೆಗಳನ್ನು ಮಾಡಬೇಕಾಗುತ್ತದೆ. ನನ್ನ ಮನಸಿಗೆ ತುಂಬಾ ನೋವಾಗಿದೆ. ೧ ಕೋಟಿ ರೂ. ಪರಿಹಾರ ನೀಡುವಂತೆ ಅವರು ಕೋರ್ಟಿನ ಮೆಟ್ಟಿಲೇರಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ