ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಸಾರಿಗೆ ಸಚಿವಾಲಯದ  ಹೊಸ ಯೋಜನೆ: ಪ್ರವಾಸಿ ವಾಹನಗಳಿಗೆ 30 ದಿನದಲ್ಲಿ ಪರವಾನಿಗೆ

ನವ ದೆಹಲಿ: ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸಿ ಆಪರೇಟರ್ ಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸಿದ 30 ದಿನದೊಳಗೆ ಪರವಾನಿಗೆ ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ಯೋಜನೆ ಪ್ರಕಟಿಸಿದೆ.
ಅಸ್ತಿತ್ವದಲ್ಲಿರುವ ಪರವಾನಿಗೆಗಳು ಕೂಡ ಮುಂದುವರೆಯಲಿವೆ. ದೇಶದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಪ್ರವಾಸಿ ಆಪರೇಟರ್ ಗಳಿಗೆ ಅಖಿಲ ಭಾರತ ಪ್ರವಾಸಿ ಪರವಾನಿಗೆಯನ್ನು ಆನ್ ಲೈನ್ಅರ್ಜಿ ಸಲ್ಲಿಕೆಯಾದ 30 ದಿನಗಳಲ್ಲಿ ನೀಡಲಾಗುವುದು ಎಂದು ಸರ್ಕಾರ ಭಾನುವಾರ ತಿಳಿಸಿದೆ.
ಆನ್‌ಲೈನ್‌ ಮೋಡ್‌ನಲ್ಲಿ ಪರವಾನಿಗೆಗೆ ಅರ್ಜಿ ಸಲ್ಲಿಸುವವರು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ ಶುಲ್ಕವನ್ನು ಠೇವಣಿ ಮಾಡಿದ 30 ದಿನದೊಳಗೆ ಅಖಿಲ ಭಾರತ ಪ್ರವಾಸಿ ಪರವಾನಿಗೆ ನೀಡಲು ನೀಡಲಾಗುವುದು ಎಂದು ಹೇಳಲಾಗಿದೆ.ಈ ಹೊಸ ನಿಯಮವನ್ನು ಅಖಿಲ ಭಾರತ ಪ್ರವಾಸಿ ವಾಹನಗಳ ಅಧಿಕಾರ ಮತ್ತು ಅನುಮತಿ ನಿಯಮಗಳು -2021 ಎಂದು ಕರೆಯಲಾಗಿದೆ.

ಪ್ರಮುಖ ಸುದ್ದಿ :-   ಪಂಜಾಬ್‌ನಲ್ಲಿ ಎಎಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ: ಸಚಿವರು, ಹಲವು ಹಾಲಿ ಶಾಸಕರಿಗೆ ಕೊಕ್; ಇಬ್ಬರು ಸಂಸದರಿಗೆ ಟಿಕೆಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement