ಹುತಾತ್ಮ ನಂದಿಗ್ರಾಮ ರೈತರ ಸ್ಮರಿಸಿಕೊಂಡ ದೀದಿ

ಪಶ್ಚಿಮ ಬಂಗಾಳ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುವ ಉದ್ದೇಶದಿಂದ ನಂದಿಗ್ರಾಮದಿಂದ ಕಣಕ್ಕಿಳಿದಿದ್ದೇನೆ ಎಂದು  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಹಾಗೂ ಟಿಎಂಸಿ ಮುಖ್ಯಸ್ಥರಾದ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಸರಣಿ ಟ್ವೀಟ್‌ಗಳಲ್ಲಿ ದೀದಿ, ೨೦೦೭ ಮಾರ್ಚ್‌ ೭ರಂದು ನಂದಿಗ್ರಾಮದಲ್ಲಿ ನಡೆದ ಗುಂಡಿನ ದಾಳಿಯನ್ನು ಸ್ಮರಿಸಿಕೊಂಡಿದ್ದು, ಈ ಘಟನೆಯು ರಾಜ್ಯದ ಕರಾಳ ಘಟನೆಗಳಲ್ಲೊಂದಾಗಿದೆ. ನಂದಿಗ್ರಾಮ ನನ್ನ ಸೋದರ ಹಾಗೂ ಸೋದರಿಯರ ಗೌರವದ ಸಂಕೇತ. ಆದ್ದರಿಂದ ಈ ಐತಿಹಾಸಿಕ ಸ್ಥಳದಿಂದ ಸ್ಪರ್ಧಿಸಿದ್ದೇನೆ. ತಮ್ಮ ಪ್ರಾಣ ತ್ಯಾಗ ಮಾಡಿದ ಕುಟುಂಬಗಳ ಜೊತೆಗೆ ಬಂಗಾಳ ವಿರೋಧಿ ಶಕ್ತಿಗಳ ಎದುರು ಹೋರಾಡುವುದು ನನಗೆ ಸಿಕ್ಕ ದೊಡ್ಡ ಗೌರವ ಎಂದು ಬರೆದುಕೊಂಡಿದ್ದಾರೆ.
೨೦೦೭ರಲ್ಲಿ ಮುಗ್ಧ ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪ್ರಾಣ ಕಳೆದುಕೊಂಡವರನ್ನು ಸ್ಮರಿಸುವ ಉದ್ದೇಶದಿಂದ ಮಾರ್ಚ್‌ ೧೪ರಂದು ಕೃಷಿಕ ದಿವಸ ಆಚರಣೆ ಮಾಡಲಾಗುತ್ತದೆ. ರೈತರು ನಮ್ಮ ಹೆಮ್ಮೆ. ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಸರಕಾರ ಬದ್ಧವಾಗಿದೆ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement