ʼವಲಸೆ ತಡೆಯಲು ದುಡಿಯೋಣ ಬಾʼ ವಿನೋತನ ಯೋಜನೆ ಇಂದಿನಿಂದ ಆರಂಭ

ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ, ಯೋಜನೆಯಿಂದ ಹೊರಗುಳಿದ ಕುಟುಂಬಗಳ ಕ್ರಿಯಾಶೀಲ ಒಳಗೊಳ್ಳುವುದು, ಸ್ಥಳೀಯವಾಗಿಯೇ ಉದ್ಯೋಗ ನೀಡಿ ಸ್ವಾವಲಂಬಿಗಳನ್ನಾಗಿಸುವುದು, ಇದಕ್ಕೆ ಪೂರಕವಾಗಿ ಕೆಲಸ, ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನ ಸರಳಗೊಳಿಸುವುದು ‘ದುಡಿಯೋಣ ಬಾ’ ಅಭಿಯಾನದ ವಿಶೇಷತೆಯಾಗಿದೆ.

ಯಾದಗಿರಿ : ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗ್ರಾಮೀ ಜನ ಉದ್ಯೋಗಾವಕಾಶ ಇಲ್ಲದ ಕಾರಣ ಹೊಟ್ಟೆಪಾಡಿಗಾಗಿ ದೊಡ್ಡ ದೊಡ್ಡ ಪಟ್ಟಣಗಳಿಗೆ ವಲಸೆ ಹೋಗುವುದು ಸರ್ವೆಸಾಮಾನ್ಯ. ಇದನ್ನು ತಪ್ಪಿಸಿ ತಮ್ಮ ಗ್ರಾಮದಲ್ಲಿಯೇ ಕೆಲಸ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ‘ ದುಡಿಯೋಣ ಬಾ’ ಎಂಬ ವಿನೂತನ ಅಭಿಯಾನ ಜಾರಿಗೆ ತಂದಿದೆ.
ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ವಲಸೆ ಪ್ರವೃತ್ತಿ ಅವಲಂಬಿಸಿವೆ. ಇದನ್ನು ಮನಗಂಡು ಗುಳೆ ತಡೆಗಟ್ಟುವ ಸಲುವಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜನರಿಗೆ ಸ್ಥಳೀಯವಾಗಿ ಕೆಲಸ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಮಾರ್ಚ ೧೫ (ಸೋಮವಾರ) ರಿಂದ ಜೂನ್ ೧೫ರ ವರೆಗೆ (೩ ತಿಂಗಳ) ಕಾಲ ‘ದುಡಿಯೋಣ ಬಾ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಆಯುಕ್ತಾಲಯವು ಮಾ.೧೫ ರಿಂದ ‘ದುಡಿಯೋಣ ಬಾ’ ಅಭಿಯಾನ ಆರಂಭಿಸುವಂತೆ ರಾಜ್ಯದ ಎಲ್ಲ ಜಿಲ್ಲಾ ಸಿಇಒ ಗಳಿಗೆ ಸೂಚನೆ ನೀಡಿದೆ.
ಅಭಿಯಾನದಲ್ಲಿನ ಕಾಮಗಾರಿಗಳು: ಬದು ನಿರ್ಮಾಣ, ಕೃಷಿ ಹೊಂಡ, ತೆರದ ಬಾವಿ ನಿರ್ಮಾಣ, ಸೀಕ್ ಪಿಟ್, ಸಮಗ್ರ ಕೆರೆ ಅಭಿವೃದ್ಧಿ, ರಸ್ತೆ ಬದಿ ನಡೆತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ ಸೇರಿವೆ.
ಅಭಿಯಾನದ ಜಾಗೃತಿ: ಅಭಿಯಾನ ಮಾ.೧೫ ರಿಂದ (ಇಂದಿನಿಂದ) ಪ್ರಾರಂಭವಾಗಲಿದ್ದು, ಮಾ.೧೫ ರಿಂದ ಮಾ.೨೨ರ ವರೆಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಜನಜಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರಲ್ಲಿ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಸ್ವಸಹಾಯ ಸಂಘದ ಸದಸ್ಯರು, ಯುವ ಸಂಘಗಳು, ಅಂಗನವಾಡಿ, ಅಶಾ ಕಾರ್ಯಕರ್ತೆಯರು, ರೈತ ಸಂಘಗಳು, ಮೇಟ್ಸ್, ಬಿಎಫ್‌ಟಿ, ತಾಂತ್ರಿಕ ಸಹಾಯಕ ಅಭಿಯಂತರರು, ಐಇಸಿ ಸಂಯೋಜಕರು, ವಿಆರ್‌ಪಿಗಳು ಜಾಗೃತಿ ಮೂಡಿಸಲಿದ್ದಾರೆ.
ಸಮಿತಿ ರಚನೆ: ಅಭಿಯಾನದ ಯಶಸ್ಸಿಗೆ ಜಿಲ್ಲಾ ಹಾಗೂ ತಾಲೂಕಾ ಮಟ್ಟ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿಯಾನದ ಉಸ್ತುವಾರಿ ಸಮಿತಿ ರಚನೆ ಮಾಡಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ ಸಿಇಒ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಒಳಗೊಂಡಿರುತ್ತಾರೆ.
ತಾಲೂಕಾ ಮಟ್ಟದಲ್ಲಿ ತಾಪಂ ಇಒ ನೇತೃತ್ವದ ತಾಲೂಕಾ ಮಟ್ಟ ಅಧಿಕಾರಿಗಳು, ಗ್ರಾ.ಪಂ ವ್ಯಾಪ್ತಿಯಲ್ಲಿ ಪಿಡಿಒ ನೇತೃತ್ವದ ಗ್ರಾ.ಪಂ ಸಿಬ್ಬಂದಿ, ಬಿಎಫ್‌ಟಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಿತಿ ರಚಿಸಲಾಗಿದೆ.
ಅಭಿಯಾನದ ಶೆಡ್ಯೂಲ್: ಮಾ.೧೫ ರಿಂದ ಮಾ.೨೨ರ ವರೆಗೆ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಜನ ಜಾಗೃತಿ ಕಾರ್ಯಕ್ರಮ ಆಯೋಜಿಸುವುದು. ಪಂಚಾಯಿತಿ ಹಂತದ ಎಲ್ಲ ಸಿಬ್ಬಂದಿ, ಯುವಕ ಸಂಘ, ರೈತ ಸಂಘಗಳು ಇನ್ನಿತರ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

ಕೋಟ್ 

ಗ್ರಾಮೀಣ ಪ್ರದೇಶದ ಜನರು ಬೇಸಿಗೆ ಸಮಯದಲ್ಲಿ ವಲಸೆ ಹೋಗುವುದನ್ನು ತಪ್ಪಿಸಿ ನಿರಂತರವಾಗಿ ಕೆಲಸ ಒದಗಿಸುವ ನಿಟ್ಟಿನಲ್ಲಿ ‘ದುಡಿಯೋಣ ಬಾ’ ಎಂಬ ವಿಶೇಷ ಅಭಿಯಾನವನ್ನು ಸರ್ಕಾರ ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಅಭಿಯಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಎಲ್ಲರಿಗೂ ಕೆಲಸ ಒದಗಿಸಲಾಗುವುದು.

– ಶಿಲ್ಪಾಶರ್ಮ, ಸಿಇಒ ಯಾದಗಿರಿ

ಮಾ.೨೩ ರಿಂದ ಮಾ.೩೧ರ ವರೆಗೆ ಉದ್ಯೋಗಚೀಟಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲ ಕುಟುಂಬಗಳಿಗೆ ಕಡ್ಡಾಯವಾಗಿ ಉದ್ಯೋಗ ಚೀಟಿ ವಿತರಿಸಬೇಕು. ಏ.೧ ರಿಂದ ಜೂ.೧೫ ರ ವರೆಗೆ ನರೇಗಾ ಕಾಮಗಾರಿ ಟೇಕಾಫ್ ಮಾಡುವುದು, ಬೇಡಿಕೆ ಪೆಟ್ಟಿಗೆ ತೆರೆದು ಬೇಸಿಕೆ ಸಲ್ಲಿಸಿದ ಕೂಲಿಕಾರರ ವಿವಿರ ಎಂಈಎಸ್ ದಾಖಲಿಸಿ, ಎರಡು ದಿನದೊಳಗೆ ಕೆಲಸ ಕೊಡಬೇಕು. ನಿರಂತರ ಕೆಲಸ ಒದಗಿಸಬೇಕು.
ಮಕ್ಕಳ ಶಾಲಾ ಶುಲ್ಕಕ್ಕೆ ಹಣ: ಜಾಗೃತಿ ಕಾರ್ಯಕ್ರಮದಲ್ಲಿ ಬೇಸಿಗೆಯ ಅವಧಿಯಲ್ಲಿ ೬೦ ದಿನಗಳ ಕೂಲಿ ಕೆಲಸ ನಿರ್ವಹಿಸದಲ್ಲಿ ಒಂದು ಕುಟುಂಬ ೧೬,೫೦೦ ರೂ ಗಳಿಸಬಹುದು. ಈ ಹಣ ಮುಂಬರುವ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬೀಜ ಮತ್ತು ರಸಗೊಬ್ಬರ ಖರೀದಿ, ಮಕ್ಕಳ ಶಾಲೆ ಮತ್ತು ಕಾಲೇಜು ಶುಲ್ಕ ಭರಿಸಲು ಅನುಕೂಲ ಆಗುತ್ತದೆ ಎಂಬುದನ್ನು ಜನರಿಗೆ ತಿಳಿಸಿ ಹೇಳಬೇಕು. ಈ ವಿವರ ಒಳಗೊಂಡ ಕರಪತ್ರ, ಪೋಸ್ಟರ್ ಮುದ್ರಿಸಿ ವ್ಯಾಪಕ ಪ್ರಚಾರ ನೀಡಬೇಕು ಎಂದು ಸೂಚಿಸಿದೆ.

ಪ್ರಮುಖ ಸುದ್ದಿ :-   ವಿಡಿಯೊ | ನೀಟ್ ಜಟಾಪಟಿ : ಬಿಜೆಪಿಯಿಂದ ಕೆಪಿಸಿಸಿ ಕಚೇರಿ ಮುತ್ತಿಗೆ ಯತ್ನ; ಬಿಜೆಪಿ ಶಾಸಕ ಬಿಪಿ ಹರೀಶ ಮೇಲೆ ಮೊಟ್ಟೆ ಎಸೆತ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement