ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಕಳೆದ ವರ್ಷ ವಿಲೀನಗೊಂಡಿವೆ. ಈ ಬ್ಯಾಂಕುಗಳ ಚೆಚೆಕ್ ಪುಸ್ತಕ ಹಾಗೂ ಪಾಸ್ ಪುಸ್ತಕಗಳನ್ನು ಈಗಲೂ ಬಳಸುತ್ತಿದ್ದಾರೆ. ಆದರೆ ಬ್ಯಾಂಕ್ ವಿಲೀನಗೊಂಡ ಒಂದು ವರ್ಷದ ನಂತರ ಅಂದರೆ ಏಪ್ರಿಲ್ 1, 2021 ರಿಂದ ಈ ಬ್ಯಾಂಕ್ ಗಳ ಚೆಕ್ ಬುಕ್, ಪಾಸ್ ಪುಸ್ತಕಗಳು ಅಮಾನ್ಯಗೊಳ್ಳಲಿವೆ. ಹೀಗಾಗಿ ಹಸ ಪಾಸ್ ಪುಸ್ತಕಗಳು ಹಾಗೂ ಚೆಕ್ ಪುಸ್ತಕಗಳನ್ನು ಪಡೆಯಬೇಕಿದೆ.

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನೊಂದಿಗೆ ವಿಲೀನಗೊಂಡಿವೆ. ನಂತರ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ ಜೊತೆ ಹಾಗೂ ಕಾರ್ಪೊರೇಷನ್ ಬ್ಯಾಂಕ್,ಆಂಧ್ರ ಬ್ಯಾಂಕ್ , ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಏಪ್ರಿಲ್ 1,2020ರಂದು ವಿಲೀನಗೊಂಡಿದೆ. ಎಲ್ಲ ವಿಲೀನ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ 2021, ಮಾರ್ಚ್ 31ರೊಳಗೆ ಹೊಸ ಚೆಕ್ ಪುಸ್ತಕ ಹಾಗೂ ಪಾಸ್ ಪುಸ್ತಕಗಳನ್ನು ಪಡೆಯುವಂತೆ ಹೇಳಿವೆ. ಹಳೆ ಚೆಕ್ ಪುಸ್ತಕ ಏಪ್ರಿಲ್ 1ರಿಂದ ಕೆಲಸ ಮಾಡುವುದಿಲ್ಲವೆಂದು ಹೇಳಿವೆ.
ವಿಲೀನವಾಗಿರುವ ಬ್ಯಾಂಕ್ ಗ್ರಾಹಕರು ಮೊಬೈಲ್ ಸಂಖ್ಯೆ, ವಿಳಾಸ, ನಾಮಿನಿಯ ಹೆಸರು ಇತ್ಯಾದಿ ವಿವರಗಳನ್ನು ನವೀಕರಿಸಬೇಕಾಗುತ್ತದೆ. ಬ್ಯಾಂಕುಗಳು ವಿಲೀನಗೊಂಡ ಬ್ಯಾಂಕಿನಿಂದ ಹೊಸ ಚೆಕ್ ಪುಸ್ತಕ ಮತ್ತು ಪಾಸ್ ಪುಸ್ತಕ ಪಡೆಯಬೇಕಾಗುತ್ತದೆ. ಹಳೆಯ ಪಾಸ್ ಪುಸ್ತಕ ಮತ್ತು ಚೆಕ್ ಪುಸ್ತಕ ಗ್ರಾಹಕರ ಬಳಿ ಇರಬೇಕಾಗುತ್ತದೆ. ಹೊಸ ಚೆಕ್ ಪುಸ್ತಕ ಮತ್ತು ಪಾಸ್ ಪುಸ್ತಕ ಪಡೆದ ನಂತರ ವಿವಿಧ ಹಣಕಾಸು ಸೇವೆಗಳಲ್ಲಿ ನವೀಕರಣ ಮಾಡಲಾಗುತ್ತದೆ. ಮ್ಯೂಚುಯಲ್ ಫಂಡ್‌ಗಳು, ಜೀವ ವಿಮಾ ಪಾಲಿಸಿಗಳು, ಆದಾಯ ತೆರಿಗೆ ಖಾತೆಗಳ ಖಾತೆ ವಿವರ ಬದಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ