ಭಾರತದಲ್ಲಿ ಪ್ರತಿ ದಿನ 146 ಟನ್ ಜೈವಿಕ ವೈದ್ಯಕೀಯ ಕೊವಿಡ್‌ ತ್ಯಾಜ್ಯ ಉತ್ಪಾದನೆ…!

ನವ ದೆಹಲಿ: ದೇಶದಲ್ಲಿ ಕೊವಿಡ್‌ -19 ರಿಂದಾಗಿ ಪ್ರತಿದಿನ 146 ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎಂದು ಪರಿಸರ ಸಚಿವಾಲಯ ಸಂಸತ್ತಿಗೆ ಸೋಮವಾರ ಮಾಹಿತಿ ನೀಡಿದೆ.
ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಿಸರ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ದಿನ 146 ಟನ್ ಗಳಷ್ಟು ಬಿಎಂಡಬ್ಲ್ಯು (ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್) ಉತ್ಪಾದಿಸಲಾಗುತ್ತಿದೆ, ಇದುಕೊವಿಡ್‌-19 ರೋಗಿಗಳ ರೋಗ ನಿರ್ಣಯ, ಚಿಕಿತ್ಸೆ ಮತ್ತು ಕ್ವಾರೆಂಟೈನ್ ನಿಂದಾಗಿ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಸಿಪಿಸಿಬಿ ಪ್ರಕಾರ 2019ರಲ್ಲಿ ದೇಶದಲ್ಲಿ ಪ್ರತಿದಿನ 616 ಟನ್ ಬಯೋ ಮೆಡಿಕಲ್ ವೇಸ್ಟ್ (ಬಿಎಂಡಬ್ಲ್ಯು) ಉತ್ಪಾದನೆಯಾಗಿದೆ. ಸಿಪಿಸಿಬಿಯು ಕೊವಿಡ್‌-19 ತ್ಯಾಜ್ಯಸೇರಿದಂತೆ ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು, ಸಂಸ್ಕರಣೆ, ಸಂಸ್ಕರಣೆ ಮತ್ತು ವಿಲೇವಾರಿಗಾಗಿ ಮೀಸಲಿಟ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ರಾಜ್ಯಸಭೆಗೆ ತಿಳಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement