ರೈಲ್ವೆ ಖಾಸಗೀಕರಣವಿಲ್ಲ: ಪಿಯುಷ್‌ ಗೋಯಲ್‌ ಪುನರುಚ್ಚಾರ

ನವ ದೆಹಲಿ: ಯಾವುದೇ ಕಾರಣಕ್ಕೂ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಷ್‌ ಗೋಯಲ್‌ ಪುನರುಚ್ಚರಿಸಿದ್ದಾರೆ.
ಅವರು ಸಂಸತ್ತಿನಲ್ಲಿ ಮಾತನಾಡಿ, ಭಾರತೀಯ ರೈಲ್ವೆ ಪ್ರತಿಯೊಬ್ಬ ಭಾರತೀಯನ ಸ್ವತ್ತು. ಯಾವುದೇ ಕಾರಣಕ್ಕೂ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ. ಅದು ಸರಕಾರಿ ಒಡೆತನದಲ್ಲಿಯೇ ಇರಲಿದೆ ಎಂದರು.
೨೦೨೧-೨೨ನೇ ಆಯವ್ಯಯದಲ್ಲಿ ರೈಲ್ವೆಗೆ ೨.೧೫ ಲಕ್ಷ ಕೋಟಿ ರೂ. ಅನುದಾನ ತೆಗೆದಿಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಸರಕಾರ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್‌ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ; ಆದರೆ ಕೆಲವರಿಗೆ ವಿನಾಯಿತಿ ಇಲ್ಲ...

ನಿಮ್ಮ ಕಾಮೆಂಟ್ ಬರೆಯಿರಿ

advertisement