ಸಿಡಿ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌: ಮಗಳು ಕಿಡ್ನ್ಯಾಪ್‌, ಹುಡುಕಿ ಕೊಡಿ ಎಂದು ತಂದೆಯಿಂದ ದೂರು ದಾಖಲು

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೊಂದು ತಿರುವು ಕಂಡಿದೆ.
ಸಿಡಿ ಪ್ರಕರಣದಲ್ಲಿದ್ದಾಳೆ ಎನ್ನಲಾದ ಯುವತಿಯ ತಂದೆ ತನ್ನ ಮಗಳು ಕಿಡ್ನ್ಯಾಪ್‌ ಆಗಿದ್ದಾಳೆ ಎಂದು ಬೆಳಗಾವಿಯಲ್ಲಿ ದೂರು ದಾಖಲಿಸಿದ್ದಾರೆ.
ಸಿಡಿ ದೃಶ್ಯದಲ್ಲಿದ್ದಾಳೆ ಎಂದು ಹೇಳಲಾದ ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ‘ಮಾರ್ಚ್ 2 ರಿಂದ ನನ್ನ ಪುತ್ರಿ ನಾಪತ್ತೆಯಾಗಿದ್ದಾಳೆ, ನನ್ನ ಮಗಳು ಕಿಡ್ನಾಪ್ ಆಗಿದ್ದಾಳೆ.’ ನನ್ನ ಮಗಳನ್ನು ಹುಡುಕಿಕೊಡಿ, ಕಳೆದ 7 ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿಲ್ಲ, ನನ್ನ ಮಗಳನ್ನು ಹೆದರಿಸಿ ಬೆದರಿಸಿ ಅಶ್ಲೀಲವಾಗಿ ಶೂಟ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಹಾಸ್ಟೆಲ್ ನಲ್ಲಿದ್ದಾಗ ಮಗಳನ್ನು ಹೆದರಿಸಿ ಬೆದರಿಸಿ ಅಪಹರಿಸಲಾಗಿದೆ. ಮಗಳಿಗೆ ಬೆದರಿಕೆಯೊಡ್ಡಿ ಅಶ್ಲೀಲ ಸಿಡಿ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  .ಪ್ರಕರಣದ ಸಂಬಂಧ ಎಸ್ ಐ ಟಿ ತನಿಖೆ ನಡೆಸುತ್ತಿದ್ದು, ತಂದೆಯ ದೂರಿನ ನಂತರ ಈ ಪ್ರಕರಣ ಈಗ ಮತ್ತೊಂದು ಟ್ವಸ್ಟ್‌ ಕಾಣುವಂತಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement