ಏಪ್ರಿಲ್ ತಿಂಗಳಾಂತ್ಯಕ್ಕೆ ಬ್ರಿಟನ್‌ ಪ್ರಧಾನಿ ಭಾರತಕ್ಕೆ ಭೇಟಿ

ಲಂಡನ್: ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಏಪ್ರಿಲ್ ತಿಂಗಳಾಂತ್ಯಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದ ನಂತರ ಇದು ಅಲ್ಲಿನ ಪ್ರಧಾನಿಯ ಪ್ರಮುಖ ಅಂತಾರಾಷ್ಟ್ರೀಯ ಪ್ರವಾಸವಾಗಿದೆ.
ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಈ ವರ್ಷ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕಿತ್ತು. ಆದರೆ ಇಂಗ್ಲೆಂಡಿನಲ್ಲಿ ಕೋವಿಡ್- ಪ್ರಕರಣಗಳು ಹೆಚ್ಚಾಗಿದ್ದರಿಂದ ಕೊನೆ ಕ್ಷಣದಲ್ಲಿ ಪ್ರವಾಸ ರದ್ದುಪಡಿಸಿ ಏಪ್ರಿಲ್ ಗೆ ಮುಂದೂಡಿದ್ದರು.
ಅವರ ಭಾರತದ ಪ್ರವಾಸವು ಉಭಯ ದೇಶಗಳ ಮಧ್ಯೆ ದ್ವಿಪಕ್ಷೀಯ ಬಾಂಧವ್ಯ, ಸಹಕಾರ ವರ್ಧನೆಗೆ, ಅವಕಾಶಗಳ ವೃದ್ಧಿಗೆ ಸಹಾಯವಾಗಲಿದೆ. ಹಾಗೂ ಚೀನಾಕ್ಕೆ ಪ್ರತಿರೋಧ ಒಡ್ಡಲು ಕೂಡ ಬ್ರಿಟನ್‌ ಪ್ರಧಾನಿ ಭೇಟಿ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತನ್ನ ಪ್ರಭಾವ ವಿಸ್ತರಿಸುವ ಉದ್ದೇಶದಿಂದ ಬ್ರಿಟಿಷ್ ಸರ್ಕಾರವು ದೇಶದ ಬ್ರೆಕ್ಸಿಟ್ ನಂತರದ ರಕ್ಷಣಾ ಮತ್ತು ವಿದೇಶಾಂಗ ನೀತಿಯ ಆದ್ಯತೆಗಳನ್ನು ತಿಳಿಸಬಹುದಾಗದೆ.ಹಾಂಗ್ ಕಾಂಗ್, ಕೋವಿಡ್-19 ಸಾಂಕ್ರಾಮಿಕ, ಬ್ರಿಟನ್‌ನ 5 ಜಿ ನೆಟ್‌ವರ್ಕ್‌ನಲ್ಲಿ ಹುವಾವೇಯ ಸಕ್ರಿಯ ಪಾತ್ರವನ್ನು ನಿರಾಕರಿಸಿದ ನಂತರ ಬ್ರಿಟನ್‌ ಮತ್ತು ಚೀನಾ ಮಧ್ಯೆ ಸಂಬಂಧ ಹಳಸಿದೆ. ಹೀಗಾಗಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಭಾರತದ ಭೇಟಿಗ ಮಹತ್ವ ಪಡೆದಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ 6 ಚರಣದ ಗಾಯನವಿಲ್ಲ ; 2 ಚರಣ ಮಾತ್ರ ಹಾಡಲು ಆದೇಶ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement