ಬೆಳಗಾವಿ-ಕೊಲ್ಲಾಪುರ ಬಸ್‌ ಸಂಚಾರ ಆರಂಭ

ಬೆಳಗಾವಿ: ಬೆಳಗಾವಿ-ಕೊಲ್ಲಾಪುರ ನಡುವಿನ ಬಸ್‌ ಸಂಚಾರ ಪುನಃ ಆರಂಭಗೊಂಡಿದೆ.
ಕೊಲ್ಲಾಪುರದಲ್ಲಿ ಕರ್ನಾಟಕದ ಬಸ್‌ಗಳಿಗೆ ಶಿವಸೇನೆ ಕಾರ್ಯಕರ್ತರು ಮಸಿ ಬಳಿದ ನಂತರ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಬಸ್‌ ಸಂಚಾರವನ್ನು ಮೂರು ದಿನಗಳ ಹಿಂದೆ ರದ್ದುಗೊಳಿಸಲಾಗಿತ್ತು. ಕರ್ನಾಟಕ-ಮಹಾರಾಷ್ಟ್ರದ ಗಡಿ ನಿಪ್ಪಾಣಿ ವರೆಗೆ ಮಾತ್ರ ಬಸ್‌ ಸಂಚಾರ ಇತ್ತು. ಈಗ ಕೊಲ್ಲಾಪುರದ ವರೆಗೆ ಮತ್ತೆ ಬಸ್‌ ಸಂಚಾರ ಆರಂಭವಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬಂಟ್ವಾಳ | ಶಾಲಾ ಬಸ್ ಮೇಲೆ ಮರ ಬಿದ್ದು ಯುಕೆಜಿ ಬಾಲಕಿ ಸಾವು; ಕೆಲವರಿಗೆ ಗಾಯ

ನಿಮ್ಮ ಕಾಮೆಂಟ್ ಬರೆಯಿರಿ

advertisement