ಬೆಳಗಾವಿ-ಕೊಲ್ಲಾಪುರ ಬಸ್‌ ಸಂಚಾರ ಆರಂಭ

ಬೆಳಗಾವಿ: ಬೆಳಗಾವಿ-ಕೊಲ್ಲಾಪುರ ನಡುವಿನ ಬಸ್‌ ಸಂಚಾರ ಪುನಃ ಆರಂಭಗೊಂಡಿದೆ. ಕೊಲ್ಲಾಪುರದಲ್ಲಿ ಕರ್ನಾಟಕದ ಬಸ್‌ಗಳಿಗೆ ಶಿವಸೇನೆ ಕಾರ್ಯಕರ್ತರು ಮಸಿ ಬಳಿದ ನಂತರ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಬಸ್‌ ಸಂಚಾರವನ್ನು ಮೂರು ದಿನಗಳ ಹಿಂದೆ ರದ್ದುಗೊಳಿಸಲಾಗಿತ್ತು. ಕರ್ನಾಟಕ-ಮಹಾರಾಷ್ಟ್ರದ ಗಡಿ ನಿಪ್ಪಾಣಿ ವರೆಗೆ ಮಾತ್ರ ಬಸ್‌ ಸಂಚಾರ ಇತ್ತು. ಈಗ ಕೊಲ್ಲಾಪುರದ ವರೆಗೆ ಮತ್ತೆ ಬಸ್‌ ಸಂಚಾರ ಆರಂಭವಾಗಿದೆ.