ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಹೈದರಾಬಾದ್ ಮಧ್ಯೆ ಮಾರ್ಚ್ ೩೧ರಿಂದ ವಿಮಾನಸೇವೆ ಆರಂಭಿಸುವುದನ್ನು “ಅಲಾಯನ್ಸ್ ಏರ್ʼ ದೃಢಪಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಸೊಮವಾರ, ಬುಧವಾರ ಹಾಗೂ ಶುಕ್ರವಾರ ವಾರದಲ್ಲಿ ಮೂರು ದಿನ ವಿಮಾನಸೇವೆ ಲಭ್ಯವಿರಲಿದೆ. ಬೆಳಗ್ಗೆ ೬:೨೫ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ ಬೆಳಗ್ಗೆ ೮:೦೦ ಗಂಟೆಗೆ ಹೈದರಾಬಾದ್‌ಗೆ ತಲುಪಲಿದ್ದು, ಬೆಳಗ್ಗೆ ೮:೨೫ಕ್ಕೆ ಹೈದರಾಬಾದ್‌ನಿಂದ ಹೊರಡುವ ವಿಮಾನ ಬೆಳಗ್ಗೆ ೯:೫೫ಕ್ಕೆ ಹುಬ್ಬಳ್ಳಿಗೆ ಆಗಮಿಸುವುದು ಎಂದು ಸಚಿವರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ