ಅಮೆರಿಕದಲ್ಲಿ ಕೊವಿಡ್‌-19 ಪ್ರತಿಕಾಯಗಳೊಂದಿಗೆ ಮಗು ಜನನ…

ಫ್ಲೋರಿಡಾ: ಕೊವಿಡ್‌-೧೯ ಪ್ರತಿಕಾಯಗಳನ್ನು ಹೊಂದಿರುವ  ಮಗು ಇತ್ತೀಚೆಗೆ ಅಮೆರಿಕದಲ್ಲಿ ಜನಿಸಿದೆ.
ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಕೊವಿಡ್‌-19 ಲಸಿಕೆಯ ಒಂದು ಡೋಸ್ ಪಡೆದಿದ್ದ ಮಹಿಳೆಗೆ ಜನಿಸಿದ ಮಗು ಇದಾಗಿದ್ದು, ಕೊರೊನಾ ವೈರಸ್ ವಿರುದ್ಧ ಹೋರಾಡಲು ಬೇಕಾಗಿರುವ ಪ್ರತಿಕಾಯಗಳೊಂದಿಗೆ ಮಗು ಜನಿಸಿದೆ ಎಂದು ಹೇಳಲಾಗಿದೆ.
ಕೊವಿಡ್‌-19 ಪ್ರತಿಕಾಯಗಳೊಂದಿಗೆ ಜನಿಸಿದ ವಿಶ್ವದ ಮೊದಲ ಮಗುವಿನ ಬಗ್ಗೆ ಸಂಶೋಧನೆಗಳು ಕೂಡ ನಡೆಯುತ್ತಿದೆ ಎಂದು ಹೇಳಲಾಗಿದ್ದು, ಈ ಮಗುವಿನ ತಾಯಿ ತಾಯಿ ಮುಂಚೂಣಿ ಹೆಲ್ತ್ ಕೇರ್ ಕಾರ್ಯಕರ್ತೆಯಾಗಿದ್ದಾರೆ.
ಈ ಮಗುವಿನ ತಾಯಿ 36 ವಾರಗಳ ಗರ್ಭಿಣಿಯಾಗಿದ್ದಾಗ ಜನವರಿಯಲ್ಲಿ ಮಾಡರ್ನಾದ ಮೊದಲ ಡೋಸ್ ಪಡೆದುಕೊಂಡಿದ್ದರು. ಮೊದಲ ಡೋಸ್ ನ ಮೂರು ವಾರಗಳ ನಂತರ ಮಹಿಳೆ ‘ಆರೋಗ್ಯವಂತ’ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರಾದ ಪಾಲ್ ಗಿಲ್ಬರ್ಟ್ ಮತ್ತು ಚಾಡ್ ರುಡ್ನಿಕ್ ಹೇಳಿದ್ದಾರೆ.
ಮಗುವಿನ ಹೊಕ್ಕುಳಬಳ್ಳಿಯ ರಕ್ತವನ್ನು ವಿಶ್ಲೇಷಿಸುವ ಮೂಲಕ, ಪ್ರಸವದ ಸಮಯದಲ್ಲಿ ಪ್ರತಿಕಾಯಗಳು ಇದ್ದವು ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಇದರ ಆಧಾರದ ಮೇಲೆ ಗರ್ಭಿಣಿಯರಿಗೆ ಲಸಿಕೆ ಹಾಕುವ ಮೂಲಕ ಸೋಂಕು ಪ್ರಮಾಣ ತಡೆಗಟ್ಟಬಹುದೆಂದು ವೈದ್ಯರು ತಿಳಿಸಿದ್ದಾರೆ. ಗಿಲ್ಬರ್ಟ್ ಅವರು, ‘ತಾಯಿಯಲ್ಲಿರುವ ಪ್ರತಿಕಾಯಗಳು ಮಗುವಿಗೆ ರವಾನೆಯಾಗಿದೆಯೇ ಎಂಬುದನ್ನು ನೋಡಲು ನಾವು ಮಗುವಿನ ಬಳ್ಳಿಯನ್ನು ಪರೀಕ್ಷಿಸಿದೆವು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement