ಎಸ್‌ಬಿಐನಿಂದ ಮನೆಯಲ್ಲಿಯೇ ಈ ಸೌಲಭ್ಯ ಪಡೆದುಕೊಳ್ಳಬಹುದು

ನವ ದೆಹಲಿ: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ತನ್ನ ಗ್ರಾಹಕರ ಸೌಲಭ್ಯಗಳ ಬಗ್ಗೆ ಸಂಪೂರ್ಣ ನಿಗಾ ವಹಿಸಲಿದೆ. ಎಸ್ ಬಿಐ ಡೋರ್ ಸ್ಟೆಪ್ ಬ್ಯಾಂಕಿಂಗ್ ಈಗ ಗ್ರಾಹಕರಿಗೆ ಶಾಖೆ ಇಲ್ಲದೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ನೀವು ಎಸ್ ಬಿಐನಲ್ಲಿ ಖಾತೆ ಹೊಂದಿದ್ದರೆ ಅಥವಾ ಇನ್ನಾವುದೇ ಕಾರಣಕ್ಕಾಗಿ ಬ್ಯಾಂಕ್ ಗೆ ಹೋಗಲು ಸಾಧ್ಯವಾಗದಿದ್ದರೆ, ಈ ಸೌಲಭ್ಯವು ಬಹಳ ಉಪಯುಕ್ತವಾಗಿದೆ.
ಎಸ್ ಬಿಐ ಡೋರ್ ಸ್ಟೆಪ್ ಬ್ಯಾಂಕಿಂಗ್ :
ಎಸ್ ಬಿಐ ಡೋರ್ ಸ್ಟೆಪ್ ಬ್ಯಾಂಕಿಂಗ್ 10ಕ್ಕೂ ಹೆಚ್ಚು ವೈಶಿಷ್ಟ್ಯಗಳಿಗಾಗಿ ಬ್ಯಾಂಕ್ ಉದ್ಯೋಗಿಗಳನ್ನು ಮನೆಗೆ ಕರೆಸಲು ಅವಕಾಶ ನೀಡುತ್ತದೆ. ನಗದು ಠೇವಣಿ, ವಿತ್ ಡ್ರಾ, ಚೆಕ್ ಠೇವಣಿ, ಎಲ್ಲ ಸೌಲಭ್ಯ ಗಳನ್ನೂ ನೀವು ಪಡೆದುಕೊಳ್ಳುತ್ತಿದ್ದೀರಿ. ಪಿಂಚಣಿದಾರರು ಜೀವಪ್ರಮಾಣ ಪತ್ರಕ್ಕಾಗಿ ಬ್ಯಾಂಕ್ ಗೆ ಹೋಗುವ ಅಗತ್ಯವಿರುವುದಿಲ್ಲ.
* ನಗದು ಹಿಂಪಡೆಯುವಿಕೆ, * ಕ್ಯಾಶ್ ಪಿಕಪ್, * ಚೆಕ್ ಪಿಕಪ್, * ಡ್ರಾಫ್ಟ್ ಹೋಮ್ ಡೆಲಿವರಿ, *ಚೆಕ್ ಬುಕ್ ಗೆ ಅರ್ಜಿ ಹಾಕುವುದು * ಅವಧಿ ಠೇವಣಿಗಳಿಗೆ ಮನೆಯಲ್ಲಿಯೇ ಸಲಹೆ *ಮನೆಯಲ್ಲಿಯೇ ಕುಳಿತು ಯಾವುದೇ ಸಾಲ ಕ್ಕೆ ಸಲಹೆ * ಆದಾಯ ತೆರಿಗೆ ಚಲನ್‌ * ಪಿಂಚಣಿದಾರರಿಗೆ ಮನೆಯಲ್ಲಿ ಜೀವನ ಪ್ರಮಾಣಪತ್ರ, * ಕೆವೈಸಿ ಅಪ್ ಡೇಶನ್ ಹೀಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ.
ಆದರೆ ನೋಂದಣಿ ಅಗತ್ಯ: ಎಸ್ ಬಿಐನ ಡೋರ್ ಸ್ಟೆಪ್ ಬ್ಯಾಂಕಿಂಗ್ ನ ಪ್ರಯೋಜನವನ್ನು ಪಡೆಯಬೇಕೆಂದರೆ, ಮೊದಲು ನೋಂದಣಿ ಮಾಡಿಕೊಳ್ಳಬೇಕು. ಟೋಲ್ ಫ್ರೀ ಸಂಖ್ಯೆ1800-1037-188 ಮತ್ತು 1800-1213-721 ಸಂಖ್ಯೆಗಳಿಗೆ ಕರೆ ಮಾಡಿದರೆ ಫೋನ್ ನಲ್ಲಿ ಕೆಲವು ಬೇಸಿಕ್ ಮಾಹಿತಿ ನೀಡಲಾಗುತ್ತದೆ, ನಂತರ ನೀವು ಡೋರ್ ಸ್ಟೆಪ್ ಬ್ಯಾಂಕಿಂಗ್ ಗೆ ರಿಜಿಸ್ಟರ್ ಆಗುತ್ತೀರಿ.
ಟೋಲ್ ಫ್ರೀ ಸಂಖ್ಯೆಗಳ ಜೊತೆಗೆ ಡೋರ್ ಸ್ಟೆಪ್ ಬ್ಯಾಂಕಿಂಗ್ ನಲ್ಲಿ ಆಸಕ್ತಿ ಇರುವ ಬಳಕೆದಾರರು ಡಿಎಸ್‌ಬಿ ಮೊಬೈಲ್ ಆಪ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಆಪ್ ಅನ್ನು ಗೂಗಲ್ ನ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಅಲ್ಲದೆ, www.psbdsb.in ಗೆ ಭೇಟಿ ನೀಡಬಹುದು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ : ಗೃಹ ಸಚಿವ ಡಾ..ಪರಮೇಶ್ವರ

 

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement