ಬೆಂಗಳೂರು: ರಾಜ್ಯದ ಎಲ್ಲ ಮಸೀದಿ ಹಾಗೂ ದರ್ಗಾಗಳಲ್ಲಿ ರಾತ್ರಿ ೧೦ ಗಂಟೆಯಿಂದ ಬೆಳಗಿನ ೬ ಗಂಟೆ ವರೆಗೆ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿ ಕರ್ನಾಟಕ ವಕ್ಫ್ ಮಂಡಳಿ ಸುತ್ತೋಲೆ ಹೊರಡಿಸಿದೆ.
ದ್ವನಿವರ್ಧಕಗಳನ್ನು “ಅಜಾನ್ʼ ಹಾಗೂ ಪ್ರಮುಖ ಪ್ರಕಟನೆಗಳಿಗಾಗಿ ಮಾತ್ರ ಬಳಕೆ ಮಾಡಬೇಕು ಎಂದು ತಿಳಿಸಿದೆ. ಧ್ವನಿವರ್ಧಕಗಳಿಂದಾಗುವ ಶಬ್ದದ ಮಟ್ಟ ಮಾನವನ ಆರೋಗ್ಯ ಹಾಗೂ ಜನರ ಸ್ವಾಸ್ಥ್ಯದ ಮೇಲೆ ಹಾನಿ ಉಂಟು ಮಾಡುತ್ತದೆ.
ಮೌನವಲಯಗಳ ಬಗ್ಗೆ ಕೂಡ ಪ್ರಸ್ತಾಪಿಸಲಾಗಿದ್ದು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ನ್ಯಾಯಾಲಯಗಳ ಸುತ್ತ ೧೦೦ ಮೀ. ವಲಯವನ್ನು ಮೌನ ವಲಯ ಎಂದು ಗುರುತಿಸಲಾಗಿದೆ. ಇಂಥ ವಲಯಗಳಲ್ಲಿ ಧ್ವನಿವರ್ಧಕ ಬಳಕೆ ಮಾಡಿದರೆ, ಅಧಿಕ ಶಬ್ದದ ಪಟಾಕಿ ಸಿಡಿಸಿದರೆ ಪರಿಸರ ಸಂರಕ್ಷಣಾ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ದಂಡ ವಿಧಿಸಲಾಗುವುದು.
ಜನರೇಟರ್ ಸೆಟ್‌ಗಳು, ಧ್ವನಿವರ್ಧಕಗಳ ಬಳಕೆಯಿಂದ ಮಸೀದಿ, ದರ್ಗಾಗಳ ಸುತ್ತ ಶಬ್ದದ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಜನರ ಆರೋಗ್ಯ ಹಾಗೂ ಜನರ ಮಾನಸಿಕ ಸ್ವಾಸ್ಥ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ