ಭಾರತದಲ್ಲಿ ಇದುವರೆಗೆ ೪೦೦ ಜನರಿಗೆ ರೂಪಾಂತರಿ ಕೊರೊನಾ ವೈರಸ್‌ ಪತ್ತೆ

ಭಾರತದಲ್ಲಿ ಇದು ವರೆಗೆ ೪೦೦ಕ್ಕೂ ಹೆಚ್ಚು ಜನರಲ್ಲಿ ಬ್ರಿಟನ್‌, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ವೈರಸ್ʼಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ದೇಶದ ಹಲವು ಭಾಗಗಳಲ್ಲಿ ಹೊಸ ಪ್ರಭೇದಗಳ ಕೊರೊನಾ ವೈರಸ್‌ʼನಿಂದ ರೋಗಿಗಳು ಬಾಧಿತರಾಗಿದ್ದಾರೆ. ಈ ನಡುವೆ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ.
೪೦೦ ಪ್ರಕರಣಗಳ ಪೈಕಿ ಕಳೆದ ಎರಡು ವಾರಗಳಲ್ಲಿ ೧೫೮ ಪ್ರಕರಣಗಳು ವರದಿಯಾಗಿವೆ. ಈ ಮೂರು ರೂಪಾಂತರಗಳು ಹೆಚ್ಚು ಸಾಂಕ್ರಾಮಿಕ ಅಥವಾ ಸುಲಭವಾಗಿ ಸೋಂಕು ತಗಲಬಹುದು ಎಂದು ಹೇಳಲಾಗಿದೆ. ಬ್ರಿಟನ್ʼನಿಂದ ಡಿಸೆಂಬರ್ 29ರಂದು ಬಂದ ಆರು ಜನರಲ್ಲಿ ಮೊದಲಬಾರಿಗೆ ಬ್ರಿಟನ್‌ ರೂಪಾಂತರಿ ಕೊರೊನಾ ವೈರಸ್‌ ಪತ್ತೆಯಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement