ವರ್ಷದೊಳಗೆ ಎಲ್ಲ ಹೆದ್ದಾರಿ ಟೋಲ್‌ಗೇಟುಗಳಿಗೆ ಮುಕ್ತಿ…!

ನವ ದೆಹಲಿ: ಭಾರತದಲ್ಲಿ ಟೋಲ್ ಗೇಟುಗಳ ವ್ಯವಸ್ಥೆ ಸ್ಥಗಿತಗೊಳ್ಳಲಿವೆ ಮತ್ತು ಒಂದು ವರ್ಷದೊಳಗೆ ಸಂಪೂರ್ಣ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹವನ್ನು ಜಾರಿಗೆ ತರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ.
93% ವಾಹನಗಳು ಫಾಸ್ಟ್ಯಾಗ್ ಬಳಸಿ ಟೋಲ್ ಪಾವತಿಸುತ್ತವೆ, ಆದರೆ ಉಳಿದ ಶೇಕಡಾ 7 ರಷ್ಟು ಜನರು ಡಬಲ್ ಟೋಲ್ ಪಾವತಿಸಿದರೂ ಅದನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಒಂದು ವರ್ಷದೊಳಗೆ ದೇಶದ ಎಲ್ಲಾ ಭೌತಿಕ ಟೋಲ್ ಬೂತ್‌ಗಳನ್ನು ತೆಗೆದುಹಾಕಲಾಗುವುದು ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ಇದರರ್ಥ ಜಿಪಿಎಸ್ ಮೂಲಕ ಟೋಲ್ ಸಂಗ್ರಹ ನಡೆಯುತ್ತದೆ. ಜಿಪಿಎಸ್ ಇಮೇಜಿಂಗ್ (ವಾಹನಗಳ ಮೇಲೆ) ಆಧರಿಸಿ ಹಣವನ್ನು ಸಂಗ್ರಹಿಸಲಾಗುವುದು” ಎಂದು ಲೋಕಸಭೆಗೆ ತಿಳಿಸಿದ್ದಾರೆ.
ಫಾಸ್ಟ್‌ಟ್ಯಾಗ್‌ಗಳನ್ನು ಬಳಸಿಕೊಂಡು ಟೋಲ್ ಪಾವತಿಸದ ವಾಹನಗಳ ಬಗ್ಗೆ ಪೊಲೀಸ್ ತನಿಖೆಗೆ ಸೂಚನೆ ನೀಡಿದ್ದೇವೆ ಎಂದು ಸಚಿವರು ಹೇಳಿದರು. ವಾಹನಗಳಲ್ಲಿ ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸದಿದ್ದರೆ ಟೋಲ್ ಕಳ್ಳತನ ಮತ್ತು ಜಿಎಸ್‌ಟಿ ತಪ್ಪಿಸಿಕೊಳ್ಳುವ ಪ್ರಕರಣಗಳು ನಡೆಯುತ್ತವೆ ಎಂದರು.
ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗುವ ಫಾಸ್ಟ್‌ಟ್ಯಾಗ್‌ಗಳನ್ನು 2016 ರಲ್ಲಿ ಪರಿಚಯಿಸಲಾಯಿತು.
ಫೆಬ್ರವರಿ 16 ರಿಂದ, ಫಾಸ್ಟ್ಯಾಗ್ ಇಲ್ಲದ ವಾಹನಗಳು ದೇಶಾದ್ಯಂತ ಎಲೆಕ್ಟ್ರಾನಿಕ್ ಟೋಲ್ ಪ್ಲಾಜಾಗಳಲ್ಲಿ ಡಬಲ್ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹೊಸ ವಾಹನಗಳಲ್ಲಿ ಫಾಸ್ಟ್ಯಾಗ್‌ಗಳನ್ನು ಅಳವಡಿಸಲಾಗಿದ್ದು, ಹಳೆಯ ವಾಹನಗಳಿಗೆ ಉಚಿತ ಫಾಸ್ಟ್‌ಟ್ಯಾಗ್ ನೀಡುವುದಾಗಿ ಸರ್ಕಾರ ಹೇಳಿದೆ ಎಂದು ಗಡ್ಕರಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement