7 ರಾಷ್ಟ್ರೀಯ- 41 ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ ಬಹಿರಂಗ

ನವ ದೆಹಲಿ: ಚುನಾವಣಾ ಆಯೋಗಕ್ಕೆ 7 ರಾಷ್ಟ್ರೀಯ ಹಾಗೂ 41 ಪ್ರಾದೇಶಿಕ ಪಕ್ಷಗಳು ಸಲ್ಲಿಸಿರುವ ಪ್ರಕಾರ ಈ ಪಕ್ಷಗಳು 7372.96 ಕೋಟಿ ರೂ. ಆಸ್ತಿ ಹೊಂದಿರುವುದು ಬಹಿರಂಗವಾಗಿದೆ.
7 ರಾಷ್ಟ್ರೀಯ ಪಕ್ಷಗಳು 5349.25 ಕೋಟಿ ರೂ. ಹಾಗೂ 41 ಪ್ರಾದೇಶಿಕ ಪಕ್ಷಗಳು 2023.71 ಕೋಟಿ ರೂ. ಆಸ್ತಿ ಹೊಂದಿವೆ ಎನ್ನಲಾಗಿದೆ. ಬಿಜೆಪಿ ಅತಿ ಹೆಚ್ಚು ಆಸ್ತಿ ಹೊಂದಿದ ರಾಷ್ಟ್ರೀಯ ಪಕ್ಷವಾಗಿದ್ದು, ಇದು 2904.18 ಕೋಟಿರೂ., ಆಸ್ತಿ ಹೊಂದಿದೆ. ಅಂದರೆ ಒಟ್ಟಾರೆ ರಾಷ್ಟ್ರೀಯ ಪಕ್ಷಗಳ ಆಸ್ತಿಯಲ್ಲಿ ಬಿಜೆಪಯ ಪಾಲು ಶೇ.54.29ರಷ್ಟು. ಉಳಿದಂತೆ ಕಾಂಗ್ರೆಸ್ 928.84 ಕೋಟಿ ರೂ., ಬಿಎಸ್‌ಪಿ 738 ಕೋಟಿ ರೂ ಆಸ್ತಿ ಹೊಂದಿವೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಲಾಗಿದೆ.
2018-19ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ನಿಗದಿಪಡಿಸಿದ ಒಟ್ಟು ಬಂಡವಾಳ, ಮೀಸಲು ನಿಧಿ ಕ್ರಮವಾಗಿ 5215.77 ಕೋಟಿ ರೂ. ಮತ್ತು 1943.976 ಕೋಟಿ ರೂ. ಆಗಿದೆ.
2018-19ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಅತಿ ಹೆಚ್ಚು ಬಂಡವಾಳ 2866.717 ಕೋಟಿ ರೂ. ಎಂದು ಘೋಷಿಸಿದ್ದು, ಐಎನ್‌ಸಿ 850.426 ಕೋಟಿ ರೂ. ಹಾಗೂ ಬಿಎಸ್‌ಪಿ 735.77 ಕೋಟಿ ರೂ. ಘೋಷಿಸಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement