ಮ್ಯಾನ್ಮಾರ್ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ೫ ಲಕ್ಷ ಡಾಲರ್ ಹಣ ನೀಡಿದ್ದಾಗಿ ನಿರ್ಮಾಣ ಕ್ಷೇತ್ರದ ಉದ್ಯಮಿಯೊಬ್ಬರು ಗಂಭೀರ ಆರೋಪ ಮಾಡಿರುವುದು ಸೂಕಿಯ ಸಂಕಷ್ಟವನ್ನು ಹೆಚ್ಚಿಸಿದೆ.
ಮೌಂಗ್ ವೇಕ್ ಸೂಕಿಗೆ ಹಣ ನೀಡಿದ್ದಾಗಿ ಸರಕಾರಿ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದು ಮಿಲಿಟರಿ ಆಡಳಿತ ಸೂಕಿ ಮೇಲೆ ಗಂಭೀರ ಆರೋಪ ಹೊರಿಸಲು ಪೂರಕವಾಗಲಿದೆ. ತನ್ನ ಕಟ್ಟಡ ನಿರ್ಮಾಣ ಕಾರ್ಯ ಸರಿಯಾಗಿ ನಡೆಯಲು ಹಲವು ಸಚಿವರಿಗೆ ಹಣ ನೀಡಿದ್ದೆ. ಸೂ ಕಿ ಅವರು ತಮ್ಮ ತಾಯಿಯ ಹೆಸರಿನಲ್ಲಿ ಆರಂಭಿಸಿದ ಚಾರಿಟೇಬಲ್ ಟ್ರಸ್ಟ್ಗೆ ೨೦೧೮ರಲ್ಲಿ ೧ ಲಕ್ಷ ಅಮೆರಿಕನ್ ಡಾಲರ್ ಹಣ ನೀಡಿದ್ದೆ ಎಂದು ವೇಕ್ ತಿಳಿಸಿದ್ದಾರೆ.
ರಾಜಕೀಯ ಪಕ್ಷದ ಮುಖಂಡರಿಂದ ಆಂಗ್ ಸಾನ್ ಸೂಕಿ ಬಂಗಾರದ ಗಟ್ಟಿಗಳನ್ನು ಪಡೆದುಕೊಂಡಿದ್ದಾರೆಂದು ಈಗಾಗಲೇ ಮಿಲಿಟರಿ ಆಡಳಿತ ಅವರ ಮೇಲೆ ಆರೋಪ ಹೊರಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ