ಪೊಲೀಸ್ ಇಲಾಖೆ ಆಧುನೀಕರಣಕ್ಕೆ ತಂತ್ರಜ್ಞಾನ ವಿನಿಮಯಕ್ಕೆಬವೇರಿಯಾ ಜತೆ ಒಪ್ಪಂದ

ಬೆಂಗಳೂರು:ಅಪರಾಧ ಪ್ರಕರಣಗಳ ಪತ್ತೆ ಮತ್ತು ನಿಗ್ರಹಕ್ಕೆ ನೂತನ ತಂತ್ರಜ್ಞಾನ ಬಳಕೆ ಹಾಗೂ ಪೊಲೀಸ್ ಇಲಾಖೆ ಆಧುನೀಕರಣಕ್ಕೆ ತಂತ್ರಜ್ಞಾನ ವಿನಿಮಯಕ್ಕೆ ಸಂಬಂಧಿಸಿದಂತೆ ಜರ್ಮನಿ ದೇಶದ ಬವೇರಿಯಾ ರಾಜ್ಯದ ಜತೆಗಿನ ದ್ವಿಪಕ್ಷೀಯ ಸಂಬಂಧ ಗಟ್ಟಿಯಾಗಿದ್ದು, ಅದು ಮತ್ತಷ್ಟು ಭದ್ರಗೊಳ್ಳಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿರುವ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಕೌನ್ಸಿಲ್ ಜನರಲ್ ಅಚಿಮ್ ಬರ್ಕರ್ಟ್ ನೇತೃತ್ವದ ನಿಯೋಗಕ್ಕೆ ಶುಕ್ರವಾರ ಅವರು ಈ ಭರವಸೆ ನೀಡಿದರು.
ವಿಧಾನಸೌಧದಲ್ಲಿ ಅಚಿಮ್ ಬರ್ಕರ್ಟ್ ನೇತೃತ್ವದ ನಿಯೋಗದ ಜತೆ ಸಭೆ ನಡೆಸಿದ ಸಚಿವರಾದ ಬೊಮ್ಮಾಯಿ‌, ಜರ್ಮನಿ ಮತ್ತು ಭಾರತ ಒಕ್ಕೂಟ ವ್ಯವಸ್ಥೆ ಬೆಂಬಲಿಸುತ್ತ ಬಂದಿರುವ ಬಲಿಷ್ಠ ರಾಷ್ಟ್ರಗಳು. ಜರ್ಮನಿಯ ಬವೇರಿಯಾ ರಾಜ್ಯದ ಜತೆ ಈಗಾಗಲೇ ರಾಜ್ಯ ಸರ್ಕಾರ ೨೦೦೭ರಲ್ಲಿ ಒಪ್ಪಂದ ಮಾಡಿಕೊಂಡು ಪರಸ್ಪರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಪ್ರಮುಖವಾಗಿ ಗೃಹ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಭಯ ರಾಜ್ಯಗಳು ಪರಸ್ಪರ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.
ಜರ್ಮನಿ ದೇಶದ ಬವೇರಿಯಾದಲ್ಲಿ ಅಪರಾಧ ಪ್ರಕರಣಗಳನ್ನು ಯಾವ ರೀತಿ ನಿಯಂತ್ರಣ ಮಾಡಲಾಗುತ್ತಿದೆ. ಅಪರಾಧಗಳನ್ನು ಪತ್ತೆ ಮಾಡಲು ಬಳಕೆ ಮಾಡುತ್ತಿರುವ ತಂತ್ರಜ್ಞಾನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅನುಸರಿಸಲಾಗುತ್ತಿರುವ ಮಾರ್ಗೋಪಾಯಗಳ ಕುರಿತು ವಿಚಾರ ವಿನಿಮಯ ಆಗಬೇಕು. ಆಗ ಈ ಒಪ್ಪಂದಕ್ಕೆ ಹೆಚ್ಚು ಮಹತ್ವ ಬರುತ್ತದೆ. ಈ ನಿಟ್ಟಿನಲ್ಲಿ ಚರ್ಚೆ ಮಾಡಿ ತಂತ್ರಜ್ಞಾನ  ವಿನಿಮಯ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದರು ಬೊಮ್ಮಾಯಿ. ಅಚಿಮ್ ಬರ್ಕರ್ಟ್ ಅವರು ಸಚಿವರಾದ ಬಸವರಾಜ ಬೊಮ್ಮಾಯಿ ಅವರನ್ನು ಜರ್ಮನಿಯ ಬವೇರಿಯಾ ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಕುಮಟಾ : ಬಾಡದಲ್ಲಿ 26 ಗಂಟೆಗಳ ನಂತರ ಮನೆಗೆ ನುಗ್ಗಿದ್ದ ಚಿರತೆ ಬಂಧಿ ; ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದರು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement