ವೀಡಿಯೊಗಳು..| ಕುಮಟಾ : ಬಾಡದಲ್ಲಿ 26 ಗಂಟೆಗಳ ನಂತರ ಮನೆಗೆ ನುಗ್ಗಿದ್ದ ಚಿರತೆ ಬಂಧಿ ; ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದರು…

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದ ಮಾದರಿ ರಸ್ತೆಯ ನಾಗರಾಜ ನಾಯ್ಕ ಎಂಬವರ ಮನೆಗೆ ಶುಕ್ರವಾರ ನುಗ್ಗಿದ್ದ ಚಿರತೆಯನ್ನು ಕೊನೆಗೆ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಕುಮಟಾ ತಾಲೂಕಿನ ಬಾಡದ ಮಾದರಿ ರಸ್ತೆಯಲ್ಲಿರುವ ನಾಗರಾಜ ನಾಯ್ಕ ಎಂಬವರ ಮನೆಗೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವಧಿಯಲ್ಲಿ ಅವಿತಿದ್ದ ಚಿರತೆಯನ್ನು ಕೊನೆಗೂ ಅರವಳಿಕೆ ಮದ್ದು ನೀಡಿ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸೆರೆ ಹಿಡಿಯಲಾಯಿತು.

ಶನಿವಾರ ಸಂಜೆ 5:30 ರ ಅವಧಿಯಲ್ಲಿ ಶಿವಮೊಗ್ಗದಿಂದ ಆಗಮಿಸಿದ್ದ ಅರಣ್ಯ ಇಲಾಖೆಯ ವಿಶೇಷ ಅರಾವಳಿಕೆ ತಜ್ಞ ಡಾ. ಮುರಳಿ ಮೋಹನ ಚಿರತೆಯ ಸೊಂಟಕ್ಕೆ ಅರವಳಿಕೆ ಮದ್ದನ್ನು ವಿಶೇಷ ಗನ್ ಮೂಲಕ ಸಿಡಿಸಿ ಅದನ್ನು ಎಚ್ಚರ ತಪ್ಪಿಸಿ ಚಿರತೆಯನ್ನು ಸೆರೆ ಹಿಡಿಯಲಾಯಿತು. ಅಂತೂ ಸ್ಥಳೀಯರ ಭಯವನ್ನು ದೂರ ಮಾಡಲಾಯಿತು .

ನಾಗರಾಜ ನಾಯ್ಕ ಅವರ ಮನೆಯ ಗೋಡೆಯನ್ನು ರಂಧ್ರ ಮಾಡಿ ಚಿರತೆಗೆ ತೊಂದರೆಯಾಗದ ರೀತಿಯಲ್ಲಿ ಸುರಕ್ಷಿತವಾಗಿ ಅದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು. ಗೋಡೆಗೆ ರಂಧ್ರ ಕೊರೆದ ನಂತರ ಚಿರತೆ ರಂಧ್ರದ ಸಮೀಪ ಆಗಮಿಸಲಾಯಿತು. ಚಿರತೆ ಹಿಡಿಯುವ ಕಾರ್ಯಾಚರಣೆಯಲ್ಲಿ ಹೊನ್ನಾವರ ಅರಣ್ಯ ವಿಭಾಗದ ಡಿಎಫ್ಒ ಯೋಗೀಶ ಸಿ., ಎ ಸಿ ಎಫ್ ಲೋಹಿತ್, ಆರ್ ಎಫ್ ಓ ಪಟಗಾರ, ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಕುಮಟಾ ಪಿ ಎಸ್ ಐ ಮಂಜುನಾಥ, ಉರಗ ತಜ್ಞರಾದ ಅಶೋಕ, ಪವನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಎಸ್‌ಎಸ್‌ಎಲ್‌ಸಿ ಪರೀಕ್ಷೆ -2ರ ವೇಳಾಪಟ್ಟಿ ಬಿಡುಗಡೆ

ಇಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆ…
ಶುಕ್ರವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಬಾಡದ ಮಾದರಿ ರಸ್ತೆ ಬಳಿ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಚಿರತೆಯು ಈಶ್ವರ ನಾಯ್ಕ ಮತ್ತು ಮಾಬ್ಲೇಶ್ವರ ಅಂಬಿಗ ಎಂಬವರ ಮೇಲೆ ದಾಳಿ ಮಾಡಿದೆ. ಒಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಅವರನ್ನು ತಕ್ಷಣವೇ ಕುಮಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಬ್ಬರ ಮೇಲೆದಾಳಿ ಮಾಡಿದ ನಂತರ ಚಿರತೆ ಮರ ಹತ್ತಿ ಕುಳಿತಿತ್ತು. ತಕ್ಷಣವೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳೀಯರು ಚಿರತೆ ಕಾಯುತ್ತಿರುವಾಗಲೇ ಅಲ್ಲಿಂದಿಳಿದು ಮನೆಗೆ ಚಿರತೆ ನುಗ್ಗಿತ್ತು. ಮನೆಯಲ್ಲಿದ್ದ ನಾಲ್ವರು ಮತ್ತೊಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ತಮ್ಮನ್ನು ರಕ್ಷಿಸಿಕೊಂಡಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement