ಸಿಡಿ ಪ್ರಕರಣ : ದೆಹಲಿಯಲ್ಲಿ ಎಸ್‍ಐಟಿ ಹುಡುಕಾಟ

ಬೆಂಗಳೂರು: ಸಿಡಿ ಪ್ರಕರಣದ ಕಿಂಗ್‍ಪಿನ್‍ಗಳು ಎನ್ನಲಾದ ಇಬ್ಬರು ವ್ಯಕ್ತಿಗಳು ಹಾಗೂ ಆ ಯುವತಿ ದೆಹಲಿಯಲ್ಲಿ ಇರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಎಸ್‍ಐಟಿ ಪೊಲೀಸರು ದೆಹಲಿ ಹಾಗೂ ಸುತ್ತಮುತ್ತ ಶೋಧ ನಡೆಸುತ್ತಿದ್ದಾರೆ.
ಕಿಂಗ್‍ಪಿನ್ ಎಂದು ಹೇಳಲಾದ ವ್ಯಕ್ತಿ ಬುಧವಾರ ವಿಡಿಯೋ ತುಣುಕು ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋವನ್ನು ದೆಹಲಿಯಿಂದಲೇ ಅಪ್‍ಲೋಡ್ ಮಾಡಲಾಗಿದೆ ಎಂಬುದು ಎಸ್‍ಐಟಿ ಶಂಕೆ. ಈ ಹಿನ್ನೆಲೆಯಲ್ಲಿ ಈ ಮೂವರು ವ್ಯಕ್ತಿಗಳಿಗಾಗಿ ಎಸ್‍ಐಟಿ ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ನಡುವೆ ವಿಚಾರಣೆ ನಡೆಸಿದ್ದ ಆರು ಮಂದಿ ಶಂಕಿತ ವ್ಯಕ್ತಿಗಳಿಗೆ ಅಗತ್ಯಬಿದ್ದರೆ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳಲಾಗುವುದು ಎಂದು ಎಸ್‍ಐಟಿ ಹೇಳಿ ಕಳುಹಿಸಿಕೊಟ್ಟಿದೆ.
ಒಂದರ ಮೇಲೋಂದರಂತೆ ವಿಡಿಯೋ ತುಣುಕುಗಳು ಬರುತ್ತಿರುವುದರಿಂದ ಎಸ್‍ಐಟಿಗೆ ತಲೆನೋವು ತಂದಿದೆ. ಹಾಗಾಗಿ ಎಸ್‍ಐಟಿ ಅಧಿಕಾರಿಗಳು ಗುರುವಾರ ಮಹತ್ವದ ಸಭೆ ನಡೆಸಿ ಪ್ರಕರಣದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement