ಕಂಬಳದಲ್ಲಿ ೮.೯೬ ಸೆಕೆಂಡ್‌ಗಳಲ್ಲಿ ೧೦೦ ಮೀ ಓಡಿಹೊಸ ದಾಖಲೆ ಬರೆದ ಶ್ರೀನಿವಾಸಗೌಡ

ಬೆಳ್ತಂಗಡಿ ತಾಲೂಕು ವೇಣೂರ-ಪೆರ್ಮುಡದಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕೆರೆ ಕಂಬಳದಲ್ಲಿ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ ೮.೯೬ ಸೆಕೆಂಡ್‌ಗಳಲ್ಲಿ ೧೦೦ ಮೀ. ಓಡಿ ಹೊಸ ದಾಖಲೆ ಮಾಡಿದ್ದಾರೆ.
ಕಂಬಳದ ೧೨೫ ಮೀ. ಕೆರೆಯನ್ನು ೧೧.೨೧ ಸೆಕೆಂಡ್‌ಗಳಲ್ಲಿ ಶ್ರೀನಿವಾಸಗೌಡ ತಲುಪಿದ್ದಾರೆ. ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲ್‌ ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಅವರು ಓಡಿಸಿದ್ದಾರೆ.
ಕಳೆದ ವರ್ಷ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸಗೌಡ ೯.೫೫ ಸೆಕೆಂಡ್‌ಗಳಲ್ಲಿ ೧೦೦ ಮೀ. ಓಡಿದ್ದರು. ವೇಣೂರು ಕಂಬಳದಲ್ಲಿ ಬಜಗೋಳಿ ನಿಶಾಂತ್‌ ಶೆಟ್ಟಿ ೯.೫೨ ಸೆಕೆಂಡ್‌ಗಳಲ್ಲಿ ೧೦೦ ಮೀ. ಓಟ ಪೂರೈಸಿದ್ದರು. ಇದೇ ವರ್ಷ ಬೈಂದೂರ ವಿಶ್ವನಾಥ ದೇವಾಡಿಗ ಐಕಳ ಕಂಬಳದಲ್ಲಿ ೯.೧೫ ಸೆಕೆಂಡ್‌ಗಳಲ್ಲಿ ೧೦೦ ಮೀ. ಓಡಿದ್ದರು. ಆದರೆ ಈಗ ಶ್ರೀನಿವಾಸ ಗೌಡ ಎಲ್ಲ ದಾಖಲೆಗಳನ್ನು ನುಚ್ಚು ನೂರು ಮಾಡಿ ನೂತನ ದಾಖಲೆ ಮಾಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement