ಕೋವಿಡ್ -19 ಭಾರತದ ಮಧ್ಯಮ ವರ್ಗಕ್ಕೆ ಹೆಚ್ಚು ಕಾಡಿದೆ, ಚೀನಾಕ್ಕಿಂತಲೂ ಹೆಚ್ಚು ಬಡತನಕ್ಕೆ ಕಾರಣವಾಗಿದೆ: ಅಧ್ಯಯನದಲ್ಲಿ ಬೆಳಕಿಗೆ

ಚಿತ್ರ ಕೃಪೆ-ಇಂಟರ್ನೆಟ್

ಕೋವಿಡ್ -19 ವೈರಸ್‌ನಿಂದ ಉಂಟಾದ ಆರ್ಥಿಕ ಕುಸಿತದಿಂದಾಗಿ ಭಾರತವು ತನ್ನ ಮಧ್ಯಮ ವರ್ಗದ ಅತಿದೊಡ್ಡ ಕುಸಿತ ಕಂಡಿದ್ದು, ನೆರೆಯ ಚೀನಾಕ್ಕಿಂತ ಹೆಚ್ಚು ಬಡತನದ ತೀವ್ರತೆ ಅನುಭವಿಸಿದೆ ಎಂದು ವಾಷಿಂಗ್ಟನ್ ಮೂಲದ ಪ್ಯೂ ಇನ್ಸ್ಟಿಟ್ಯೂಟಿನ ಹೊಸ ಅಧ್ಯಯನವೊಂದು ಹೇಳಿದೆ.
ಕೊವಿಡ್‌ -19 ಸಾಂಕ್ರಾಮಿಕದಿಂದ ಸುಮಾರು 32 ಮಿಲಿಯನ್ ಭಾರತೀಯರು ಮಧ್ಯಮ ವರ್ಗದಿಂದ ಹೊರಬಿದ್ದಿದ್ದು, 75 ಮಿಲಿಯನ್ ಜನ ಬಡತನಕ್ಕೆ ಬಂದಿದ್ದಾರೆ ಎಂದು ಈ ಅಧ್ಯಯನವು ಹೇಳಿದೆ.
ಕಳೆದ ವರ್ಷ ಸಾಂಕ್ರಾಮಿಕ-ಪ್ರೇರಿತ ಆರ್ಥಿಕ ಕುಸಿತದಿಂದಾಗಿ ದಿನಕ್ಕೆ ಬಹುತೇಕ ಜನರು ಎರಡು ಡಾಲರ್‌ಗಿಂತ ಕಡಿಮೆ ಆದಾಯ ಗಳಿಸುವಂತಾಯಿತು. ಏಕೆಂದರೆ 2020 ರಲ್ಲಿ ಭಾರತವು ಕೊವಿಡ್‌ನಿಂದಾಗಿ ತೀವ್ರ ಆರ್ಥಿಕ ಹಿಂಜರಿತಕ್ಕೆ ಸಿಲುಕಿತು ಎಂದು ಅಧ್ಯಯನ ಹೇಳಿದೆ.
ಭಾರತ ಮತ್ತು ಚೀನಾ ಒಟ್ಟಾಗಿ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗ ಹೊಂದಿವೆ, ಆದ್ದರಿಂದ ಈ ಎರಡು ದೇಶಗಳಲ್ಲಿ ಏನಾಗುತ್ತದೆ ಎಂಬುದು “ಜಾಗತಿಕ ಮಟ್ಟದಲ್ಲಿ ಆದಾಯದ ವಿತರಣೆಯಲ್ಲಿನ ಬದಲಾವಣೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಹಿರಿಯ ಅಧ್ಯಯನ ಸಂಶೋಧಕ ರಾಕೇಶ್ ಕೊಚ್ಚರ್ ಹೇಳುತ್ತಾರೆ.
ಚೀನಾದ ಆರ್ಥಿಕ ಮರುಕಳಿಕೆ ಪರಿಣಾಮವಾಗಿ, ಕೇವಲ 10 ಮಿಲಿಯನ್ ಚೀನಿಯರು ಮಾತ್ರ ಮಧ್ಯಮ ವರ್ಗದಿಂದ ಹೊರಬಂದಿದ್ದು, ಸುಮಾರು 30 ಮಿಲಿಯನ್ ಚೀನಿಯರನ್ನು ಕಡಿಮೆ-ಆದಾಯದ ಶ್ರೇಣಿಗೆ ಕೊವಿಡ್‌ ನೂಕಿದೆ ಎಂದು ಅಧ್ಯಯನ ಹೇಳಿದೆ. ಚೀನಾದಲ್ಲಿ ದಿನಕ್ಕೆ ಡಾಲರ್‌ 2 ಮತ್ತು ಡಾಲರ್‌ 10ರ ನಡುವೆ ಗಳಿಸುತ್ತಿದ್ದವರು ಸುಮಾರು 641 ಮಿಲಿಯನ್‌ಗೆ ಇದ್ದಾರೆ.
ಭಾರತದಲ್ಲಿ ಹೆಚ್ಚಿನ ಜನರು ಉದ್ಯೋಗ ನಷ್ಟದಿಂದ ಆರ್ಥಿಕ ಗಳಿಕೆಯಲ್ಲಿ ಕುಸಿತ ಕಂಡಿದ್ದಾರೆ ಎಂಬ ಅಂಶವು ಗ್ರಾಮೀಣ ಉದ್ಯೋಗ ಕಾರ್ಯಕ್ರಮವಾದ ಎಂಎನ್‌ಆರ್‌ಇಜಿಎಸ್‌ನಲ್ಲಿ ಭಾಗವಹಿಸಿದ ಜನರ ಸಂಖ್ಯೆಯಲ್ಲಿ ಏರಿಕೆಯಾಗಿದ್ದರ ಮೇಲೆಯೂ ಅಂದಾಜಿಸಲಾಗಿದೆ. ಏಪ್ರಿಲ್ 1, 2020 ಮತ್ತು ಫೆಬ್ರವರಿ 21, 2021 ರ ನಡುವೆ 70 ದಶಲಕ್ಷ ಕುಟುಂಬಗಳಿಂದ 100 ದಶಲಕ್ಷಕ್ಕೂ ಹೆಚ್ಚು ಜನರು ಈ ಯೋಜನೆಯಲ್ಲಿ ಭಾಗವಹಿಸಿದ್ದರು. ಅಂದರೆ ೩೦ ದಶಲಕ್ಷ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ.
ಜೂನ್ 2020ರಲ್ಲಿ, ಗ್ರಾಮೀಣ ಭಾರತದಲ್ಲಿ ಲಕ್ಷಾಂತರ ಕಾರ್ಮಿಕರು ತಮ್ಮ ಮನೆಗಳಿಗೆ ಮರಳಿದಾಗ, ಎಂಎನ್‌ಆರ್‌ಇಜಿಎಸ್‌ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಶೇಕಡಾ 80ರಷ್ಟು ಏರಿಕೆಯಾಗಿದೆ. ನವೆಂಬರ್‌ನಲ್ಲಿ ಆರ್ಥಿಕತೆಯು ಹೆಚ್ಚಾಗಲು ಪ್ರಾರಂಭಿಸಿದಾಗಲೂ, ಎಂಎನ್‌ಆರ್‌ಇಜಿಎಸ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಇದೇ ವರ್ಷದ ಹಿಂದಿನ ತಿಂಗಳಿಗಿಂತ 47 ಶೇಕಡಾ ಹೆಚ್ಚಾಗಿದೆ. ಎಂಎನ್‌ಆರ್‌ಇಜಿಎಸ್‌ಯೋಜನೆ ಜನರಿಗೆ ಒಂದು ವರ್ಷದಲ್ಲಿ ಗರಿಷ್ಠ 100 ದಿನಗಳ ಉದ್ಯೋಗ ನೀಡುತ್ತದೆ.
ಸಾಂಕ್ರಾಮಿಕ ರೋಗದ ಮಧ್ಯೆ ಭಾರತ ಮತ್ತು ಚೀನಾದಲ್ಲಿ ಜೀವನ ಮಟ್ಟಗಳು ಹೇಗೆ ವಿಕಸನಗೊಂಡಿವೆ ಎಂಬುದಕ್ಕೆ ವ್ಯತಿರಿಕ್ತತೆಯು ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಅವರು ಎಲ್ಲಿ ನಿಂತರು ಎಂಬುದರ ಹಿನ್ನೆಲೆಯಲ್ಲಿ ಸ್ಪಷ್ಟವಾಗುತ್ತದೆ ”ಎಂದು ಕೊಚ್ಚರ್ ಹೇಳುತ್ತಾರೆ.
ಅರ್ಥಶಾಸ್ತ್ರಜ್ಞರು ಮತ್ತು ವಿಶ್ಲೇಷಕರ ಲೆಕ್ಕಾಚಾರಗಳೊಂದಿಗೆ ಭಾರತದ ಮಧ್ಯಮ ವರ್ಗದ ನಿಜವಾದ ಗಾತ್ರದ ಬಗ್ಗೆ ಯಾವಾಗಲೂ ಸಂಘರ್ಷದ ಲೆಕ್ಕಾಚಾರಗಳಲ್ಲಿ 80 ದಶಲಕ್ಷದಿಂದ 600 ದಶಲಕ್ಷದ ವರೆಗೆ ವ್ಯಾಪಿಸಿವೆ. ಪ್ಯೂ ವರದಿಯು ಭಾರತದ ಮಧ್ಯಮ ವರ್ಗದ ಒಟ್ಟು ಸಂಪ್ರದಾಯಬದ್ಧ ಅಂದಾನಿನೊಂದಿಗೆ ಹೋಗುತ್ತದೆ. 2020ರ ವೇಳೆಗೆ ಸುಮಾರು 99 ದಶಲಕ್ಷ ಜನರು ಭಾರತೀಯ ಮಧ್ಯಮ ವರ್ಗದ ಭಾಗವಾಗುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ವರ್ಗದ ಸಂಖ್ಯೆ ಈಗ 66 ದಶಲಕ್ಷಕ್ಕೆ ಇಳಿದಿದೆ. ಪ್ರತಿದಿನ ಡಾಲರ್‌ 10 ಮತ್ತು ಡಾಲರ್‌ 20 ರ ನಡುವೆ ಗಳಿಸುವ ಜನರನ್ನು ಮಧ್ಯಮ ಆದಾಯದ ಶ್ರೇಣಿ ಎಂದು ಪ್ಯೂ ಪರಿಗಣಿಸಿದೆ.
ಪ್ಯೂ ಅಧ್ಯಯನವು ಜನರನ್ನು ಐದು ಗುಂಪುಗಳಾಗಿ ವಿಂಗಡಿಸುತ್ತದೆ: ಬಡವರು, ಕಡಿಮೆ ಆದಾಯ, ಮಧ್ಯಮ ಆದಾಯ, ಮೇಲಿನ-ಮಧ್ಯಮ-ಆದಾಯ ಮತ್ತು ಹೆಚ್ಚಿನ ಆದಾಯ. ಬಡವರು ಪ್ರತಿದಿನ ಡಾಲರ್‌ 2 ಕ್ಕಿಂತ ಕಡಿಮೆ ಗಳಿಸುತ್ತಾರೆ. ಮತ್ತು ಕಡಿಮೆ ಆದಾಯದ ಜನರು ಡಾಲರ್‌ 2- 10 ರ ನಡುವೆ ಗಳಿಸುತ್ತಾರೆ ಎಂದು ಅದು ಹೇಳಿದೆ.
ಪ್ರತಿದಿನ ಡಾಲರ್‌ 20 ರಿಂದ 50 ರ ವರೆಗೆ ಗಳಿಸುವವರನ್ನು ಮೇಲಿನ-ಮಧ್ಯಮ-ಆದಾಯದ ಗುಂಪಿನ ಭಾಗವೆಂದು ಪರಿಗಣಿಸಲಾಗುತ್ತದೆ. “ಎಲ್ಲಾ ಅಂಕಿ ಅಂಶಗಳು 2011 ರ ಬೆಲೆಗಳು ಮತ್ತು ಕೊಳ್ಳುವ ಶಕ್ತಿ ಸಾಮರ್ಥ್ಯಗಳು ಡಾಲರ್‌ಗಳಲ್ಲಿ ವ್ಯಕ್ತವಾಗಿವೆ” ಎಂದು ವರದಿ ಹೇಳುತ್ತದೆ.
ವರದಿಯ ಪ್ರಕಾರ, ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಚೀನಾದಲ್ಲಿ ಸುಮಾರು 500 ಮಿಲಿಯನ್ ಜನರು ಮಧ್ಯಮ-ಆದಾಯದ ಗುಂಪಿಗೆ ಸೇರಿದವರಾಗಿದ್ದರು ಮತ್ತು ಈ ಸಂಖ್ಯೆ ಈಗ ಕಡಿಮೆಯಾಗಿದೆ.
ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದ ಆರ್ಥಿಕತೆಯು ಕಳೆದ ಮಾರ್ಚ್‌ನಿಂದ ಈ ಹಣಕಾಸು ವರ್ಷದಲ್ಲಿ ಶೇಕಡಾ 8ರಷ್ಟು ಕುಗ್ಗುವ ಮುನ್ಸೂಚನೆ ಇದೆ. ಆದರೆ ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆ ಕನಿಷ್ಠ 12 ಪ್ರತಿಶತದಷ್ಟು ವಿಸ್ತರಿಸಲಿದೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ. ಏತನ್ಮಧ್ಯೆ, ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಆರ್ಥಿಕ ವಿಸ್ತರಣೆ ಕಂಡ ಏಕೈಕ ಪ್ರಮುಖ ದೇಶ ಚೀನಾ, ಶೇಕಡಾ 2.3 ರಷ್ಟು ಬೆಳವಣಿಗೆ ಹಿಂಡಿದೆ. ಇದು ಈ ವರ್ಷ “ಶೇಕಡಾ 6 ಕ್ಕಿಂತ ಹೆಚ್ಚು” ಬೆಳವಣಿಗೆ ತೋರಿಸುತ್ತಿದೆ.
2011 ಮತ್ತು 2019 ರ ನಡುವೆ ಭಾರತದಲ್ಲಿ ಬಡವರ ಸಂಖ್ಯೆ 340 ದಶಲಕ್ಷದಿಂದ 78 ದಶಲಕ್ಷಕ್ಕೆ ಇಳಿದಿದೆ ಎಂದು ಅಂದಾಜಿಸಲಾಗಿದೆ. ಚೀನಾದಲ್ಲಿ 2011ರಿಂದ 2019ರ ವರೆಗೆ ಮಧ್ಯಮ-ಆದಾಯದ ಶ್ರೇಣಿಗೆ 247 ಮಿಲಿಯನ್ ಜನರನ್ನು ಸೇರಿಸಲಾಗಿದೆ. ಮೇಲಿನ-ಮಧ್ಯಮ-ಆದಾಯದ ಜನಸಂಖ್ಯೆಯು ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ, 60 ದಶಲಕ್ಷದಿಂದ 234 ದಶಲಕ್ಷಕ್ಕೆ ಬಂದಿದೆ. 2020ರಲ್ಲಿ ಜಾಗತಿಕ ಮಧ್ಯಮ-ಆದಾಯದ ಜನಸಂಖ್ಯೆಯಲ್ಲಿ ಶೇಕಡಾ 37 ರಷ್ಟನ್ನು ಚೀನಾ ಹೊಂದಿದೆ.
ಭಾರತ ಮತ್ತು ಚೀನಾ ಜಾಗತಿಕ ಜನಸಂಖ್ಯೆ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನದನ್ನು ಹೊಂದಿವೆ, “ಈ ಎರಡು ದೇಶಗಳಲ್ಲಿನ ಸಾಂಕ್ರಾಮಿಕ ರೋಗದ ಹಾದಿ – ಮತ್ತು ಪ್ರತಿಯೊಂದೂ ಹೇಗೆ ಚೇತರಿಸಿಕೊಳ್ಳುತ್ತದೆ ಎಂಬುದು ಬದಲಾವಣೆಗಳ ಮೇಲೆ ಗಣನೀಯ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement