ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆ ಬಗ್ಗೆ ಆತಂಕ:24ರಂದು ಶಿರಸಿಯಲ್ಲಿ ವಿಶೇಷ ಸಮಾಲೋಚನಾ ಕಾರ್ಯಾಗಾರ

ಶಿರಸಿ: ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆ”ಗಳ ಕುರಿತು  ವಿಶೇಷ ಸಮಾಲೋಚನಾ ಕಾರ್ಯಾಗಾರ ಮಾ.24ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ನಗರದ ಹೊಸ ಮಾರುಕಟ್ಟೆ ಬಡಾವಣೆಯಲ್ಲಿರುವ ತೋಟಗಾರರ ಗ್ರಾಮೀಣ ಪತ್ತಿನ  ಸಹಕಾರಿ ಸಂಘದ (ಟಿಆರ್ಸಿ ಬ್ಯಾಂಕ್) ಸಭಾಭವನದಲ್ಲಿ ನಡೆಯಲಿದೆ.
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ಈ ವಿಶೇಷ ಸಮಾಲೋಚನಾ ಕಾರ್ಯಾಗಾರ ನಡೆಯಲಿದೆ.
ಬಯಲುಸೀಮೆಯ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವ ಹೆಸರಿನಲ್ಲಿ  ಜಿಲ್ಲೆಯ ಜೀವನಾಡಿಯಾಗಿರುವ ಬೇಡ್ತಿ, ಶಾಲ್ಮಲಾ ಮತ್ತು ಅಘನಾಶಿನಿ ನದಿಗಳಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ, ಅಲ್ಲಿಂದ ನೀರನ್ನು ಪಂಪ್-ಮಾಡಿ ಧರ್ಮಾ ಮತ್ತು ವರದಾ ನದಿಗಳಿಗೆ ಸಾಗಿಸಿ,  ಅಲ್ಲಿಂದ ಕಾಲುವೆಗಲ್ಲಿ ಬಯಲು ಪ್ರಾಂತ್ಯಕ್ಕೆ  ನೀರು ಸಾಗಿಸುವ ಬೃಹತ್ ಯೋಜನೆ ಇದು ಎಂದು ನಂಬಲರ್ಹ ಮೂಲಗಳಿಂದ ದೊರಕಿರುವ  ಮಾಹಿತಿಯಾಗಿದೆ. ಕರ್ನಾಟಕ ಸರಕಾರದ ಈ ವರ್ಷದ ಬಜೆಟ್ಟಿನಲ್ಲಿ ಈ ಯೋಜನೆಯ ವಿಸ್ತೃತವರದಿ ತಯಾರಿಸುವ ಕಾರ್ಯವನ್ನು ಕೇಂದ್ರ ಜಲಶಕ್ತಿ ಇಲಾಖೆಯ ಎನ್‌ಡಬ್ಲುಡಿಎ ( NWDA )ವಿಭಾಗಕ್ಕೆ ನೀಡಲು ತೀರ್ಮಾನಿಸಿದೆ.
ಈ ಯೋಜನೆಯು ಜಿಲ್ಲೆಯ ರೈತರು, ವನವಾಸಿಗಳು, ಕರಾವಳಿಯ ಮೀನುಗಾರರು- ಹೀಗೆ ಎಲ್ಲರ ಜನಜೀವನದ ಮೇಲೆ  ಬೀರಬಹುದಾದ ದುಷ್ಪರಿಣಾಮಗಳನ್ನು ಅರಿಯಬೇಕಿದೆ. ಜೊತೆಗೆ, ಅರಣ್ಯ ಮತ್ತು ಪರಿಸರದ ಮೇಲೆ ಇದರ ದೀರ್ಘಕಾಲೀನ ಪರಿಣಾಮಗಳನ್ನೂ ಅರಿಯಬೇಕಿದೆ. ಆದ್ದರಿಂದ, ಈ ಕುರಿತು ಜನಪ್ರತಿನಿಧಿಗಳು, ಸಾಮಾಜಿಕ ಮುಖಂಡರುಗಳು ಹಾಗೂ ತಜ್ಞರ ಅಭಿಪ್ರಾಯ ಕ್ರೋಢೀಕರಿಸುವ ಉದ್ದೇಶದಿಂದ, ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಇದರ ಆಧಾರದಲ್ಲಿ ಸರ್ಕಾರಕ್ಕೆ ಸಮಗ್ರವಾದ ಸಾರ್ವಜನಿಕ ಮನವಿ ಸಲ್ಲಿಸುವ ಉದ್ದೇಶವಿದೆ ಎಂದು ತಿಳಿಸಲಾಗಿದೆ.
ಈ ನದಿಗಳ ಸುಗಮ ಹರಿವಿನ ಜೊತೆಗೆ ನಮ್ಮೆಲ್ಲರ ಜೀವನದ ಹರಿವು ಬೆಸೆದುಕೊಂಡಿರುವುದರಿಂದ, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಅನುಭವಗಳನ್ನು ಹಂಚಿಕೊಳ್ಳಬೇಕು ಎಂದು ಕೋರಲಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

5 / 5. 1

ಶೇರ್ ಮಾಡಿ :

  1. geek

    ಈ ಬಗ್ಗೆ ವೈಜ್ಞಾನಿಕವಾಗಿ ಸಮೀಕ್ಷೆಗಳು ನಡೆದು ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯಾವ ರೀತಿ ಮುಂದುವರೆಸಿಕೊಂಡು ಹೋಗಬೇಕು ಎನ್ನುವುದರ ಬಗ್ಗೆ ವಿಸ್ತೃತ ಚರ್ಚೆಯಾಗಲಿ

ನಿಮ್ಮ ಕಾಮೆಂಟ್ ಬರೆಯಿರಿ

advertisement