ಪರಮ್ ಬಿರ್ ಸಿಂಗ್ ಪತ್ರ: ಅಜಿತ ಪವಾರ್‌- ಜಯಂತ ಪಾಟೀಲ ಭೇಟಿ ಮಾಡಲಿರುವ ಶರದ್ ಪವಾರ್

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಾ.೨೧ರಂದು (ಭಾನುವಾರ) ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಿದ್ದಾರೆ.
ಗೃಹ ಸಚಿವ ಅನಿಲ್ ದೇಶ್ಮುಖ್ “ದುಷ್ಕೃತ್ಯ” ದಲ್ಲಿ ತೊಡಗಿದ್ದಾರೆ. ಅಮಾನತುಗೊಂಡ ಎಪಿಐ ಸಚಿನ್ ವಾಝೆ ಅವರಿಗೆ ಪ್ರತಿ ತಿಂಗಳು 100 ಕೋಟಿ ರೂ.ಹಣ ವಸೂಲಿ ಮಾಡಿಕೊಡುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದ ನಂತರ ಈ ಭೇಟಿಗೆ ಮಹತ್ವ ಬಂದಿದೆ.
ಪತ್ರದಲ್ಲಿ, ಈಗ ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್ ಆಗಿ ನೇಮಕಗೊಂಡಿರುವ ಪರಮ್ ಬಿರ್ ಸಿಂಗ್, “ನಿಜವಾದ ತಪ್ಪಿತಸ್ಥರಿಂದ ಗಮನವನ್ನು ಬೇರೆಡೆ ಸೆಳೆಯಲು ತಮ್ಮನ್ನು ಬಲಿಪಶುವನ್ನಾಗಿ ಮಾಡಲಾಗಿದೆ” ಎಂದು ಹೇಳಿದ್ದಾರೆ. ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ನಿವಾಸವಾದ ಆಂಟಿಲಿಯಾ ಬಳಿ ಸ್ಫೋಟಕಗಳನ್ನು ಹೊಂದಿರುವ ಕಾರನ್ನು ಎಟಿಎಸ್ ಮತ್ತು ಎನ್ಐಎ ತನಿಖೆ ನಡೆಸುತ್ತಿವೆ.

ಪ್ರಮುಖ ಸುದ್ದಿ :-   ಟಿ20 ವಿಶ್ವಕಪ್ ಕ್ರಿಕೆಟ್‌ 2024 : 15 ಆಟಗಾರರ ಭಾರತದ ತಂಡ ಪ್ರಕಟ ; ಕೆಎಲ್ ರಾಹುಲ್ ಗೆ ಕೊಕ್

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement