ನಾನು ಕತ್ತೆ, ಯಾಕೆಂದರೆ ನನಗೆ ಅಧಿಕಾರಿ ಕುಟುಂಬದ ನೈಜ ಮುಖ ಗುರುತಿಸಲು ಸಾಧ್ಯವಾಗಲಿಲ್ಲ : ಮಮತಾ

ಕೊಲ್ಕತ್ತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾನುವಾರ ಪುರ್ಬಾ ಮೇದಿನಿಪುರ ಜಿಲ್ಲೆಯ ಪ್ರಭಾವಿ ಅಧಿಕಾರಿ ಕುಟುಂಬದ ‘ನಿಜವಾದ ಮುಖ’ ವನ್ನು ಗುರುತಿಸಲು ತನಗೆ ಸಾಧ್ಯವಾಗಲಿಲ್ಲ ಎಂದು ತನ್ನನ್ನೇ ತಾನು ದೂಷಿಸಿಕೊಂಡಿದ್ದಾರೆ.
ಸುವೇಂಧು ಅಧಿಕಾರಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿ ಈಗ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದಾರೆ.
ಕಂಠಿ ದಕ್ಷಿಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, ಅಧಿಕಾರಿ ಕುಟುಂಬ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದ್ದಾರೆ ಎಂಬ ವದಂತಿಗಳನ್ನು ತಾವು ಕೇಳಿರುವುದಾಗಿ ಹೇಳಿದರು.
ಅಧಿಕಾರಿ ಕುಟುಂಬವನ್ನು ಮೀರ್ ಜಾಫರ್ ಕುಟುಂಬಕ್ಕೆ ಹೋಲಿಸಿದ ಮಮತಾ ಬ್ಯಾನರ್ಜಿ, ಈ ಪ್ರದೇಶದ ಜನರು ಇದನ್ನು ಸಹಿಸುವುದಿಲ್ಲ ಮತ್ತು ಮತದಾನ ಮಾಡುವ ಮೂಲಕ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.
ನಾನು ಅಧಿಕಾರಿ ಕುಟುಂಬವನ್ನು ಗುರುತಿಸಲು ವಿಫಲನಾಗಿದ್ದೇನೆ , ನಾನು ‘ದೊಡ್ಡ ಕತ್ತೆ’ (ಅಮಿ ಏಕ್ತಾ ಬೋರೋ ಗಧಾ) ಎಂದು ಹೇಳುತ್ತೇನೆ. ನನಗೆ ಗೊತ್ತಿಲ್ಲ (ಅದರ ಬಗ್ಗೆ) ಆದರೆ ಜನರು ಅಧಿಕಾರಿಗಳ ಒಟ್ಟು ‘ಸಾಮ್ರಾಜ್ಯ’ 5,000 ಕೋಟಿ ರೂಪಾಯಿ ಎಂದು ಹೇಳುತ್ತಾರೆ ಮತ್ತು ಅವರು ಹಣವನ್ನು ಮತವನ್ನು ಖರೀದಿಸಲು ಬಳಸುತ್ತಾರೆ ಎಂದು ತಿಳಿದು ಬಂದಿದೆ. ಆದರೆ ಅವರಿಗೆ ಮತ ನೀಡಬೇಡಿ’ ಎಂದು ಬ್ಯಾನರ್ಜಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement