ಪತ್ರ ತನ್ನದೇ ಎಂದು ಖಚಿತಪಡಿಸಿದ ಪರಮ್‌ಬಿರ್‌: ಶೀಘ್ರದಲ್ಲೇ ಸರ್ಕಾರ ತಲುಪಲಿದೆ ಸಹಿ ಮಾಡಿದ ನಕಲು

ಮುಂಬೈ: ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಳುಹಿಸಿದ “ಸಹಿ ಮಾಡದ ಪತ್ರ” ದ ಹಿಂದಿನ ರಹಸ್ಯಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಇ-ಮೇಲ್ ಮಾಡಿದ ಪತ್ರ ತಮ್ಮದು ಹಾಗೂ ಸಹಿ ಮಾಡಿದ ನಕಲು ಶೀಘ್ರದಲ್ಲೇ ಮಹಾರಾಷ್ಟ್ರ ಸರ್ಕಾರಕ್ಕೆ ತಲುಪಲಿದೆ ಎಂದು ದೃಢೀಕರಿಸುವ ಮೂಲಕ, ಮೂಲಕ ಪತ್ರದ ಸತ್ಯಾಸತ್ಯತೆಯ ಕುರಿತಾದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಪರಮ್ ಬಿರ್ ಸಿಂಗ್ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರಿಗೆ ಪತ್ರ  ತನ್ನದೇ ಎಂದು ಖಚಿತಪಡಿಸಿದ್ದಾರೆ;
ಹೋಮ್ ಗಾರ್ಡ್ಸ್ನ ಕಮಾಂಡೆಂಟ್ ಜನರಲ್ ಪರಮ್ ಬಿರ್ ಸಿಂಗ್ ಅವರ ಹೆಸರಿನಲ್ಲಿ ಸಹಿ ಮಾಡದ ಪತ್ರವನ್ನು ಮಧ್ಯಾಹ್ನ ಮುಖ್ಯಮಂತ್ರಿಗಳ ಕಾರ್ಯದರ್ಶಿಯ ಅಧಿಕೃತ ಇಮೇಲ್ ಐಡಿಯಲ್ಲಿ ಸ್ವೀಕರಿಸಲಾಗಿದೆ” ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಪತ್ರವನ್ನು ಕಳುಹಿಸಿದ ಇಮೇಲ್ ಐಡಿಯನ್ನು ಪರಿಶೀಲಿಸಲಾಗುತ್ತಿದೆ ಮತ್ತು ರಾಜ್ಯ ಗೃಹ ಇಲಾಖೆ ಸಿಂಗ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಧಿಕೃತ ದಾಖಲೆಯಲ್ಲಿ ಸಿಂಗ್ ಅವರ ಇಮೇಲ್ ಐಡಿ ವಿಭಿನ್ನವಾಗಿರುವುದರಿಂದ ಪರಿಶೀಲನೆ ಅಗತ್ಯವಾಗಿದೆ ಎಂದು ಅದು ಹೇಳಿದೆ.
ದೇಶ್ಮುಖ್ ಅವರು ಬಾರ್, ರೆಸ್ಟೋರೆಂಟ್ ಮತ್ತು ಇತರ ಸಂಸ್ಥೆಗಳಿಂದ ಹಣವನ್ನು ಸಂಗ್ರಹಿಸಲು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಸಿಂಗ್ ಅವರ ಪತ್ರದಲ್ಲಿ ಆರೋಪಿಸಲಾಗಿದೆ. ಆರೋಪಗಳು ಸುಳ್ಳು ಮತ್ತು ತನ್ನನ್ನು ಉಳಿಸಿಕೊಳ್ಳಲು ಮತ್ತು ಮಹಾರಾಷ್ಟ್ರ ಅಘಾಡಿ ಸರ್ಕಾರದ ಇಮೇಜ್‌ ಕೆಡಿಸಲು ಇದು ಸಿಂಗ್ ಮಾಡಿದ ಪಿತೂರಿಯ ಭಾಗವಾಗಿದೆ ಎಂದು ದೇಶಮುಖ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement