ಕರ್ನಾಟಕದಲ್ಲಿ ನಿರಂತರ ಏರಿಕೆಗೆ ಬ್ರೇಕ್‌…ಸ್ವಲ್ಪ ಕುಸಿತಕಂಡ ದೈನಂದಿನ ಕೊರೊನಾ ಸೋಂಕು

ಬೆಂಗಳೂರು: ದಿನದಿಂದ ದಿನಕ್ಕೆ ಏರುತ್ತಿದ್ದ ಕೊರೊನಾ ದೈನಂದಿನ ಸೋಂಕು ಸೋಮವಾರ ಸ್ವಲ್ಪ ಕಡಿಮೆಯಾಗಿದೆ. ಆದರೆ ಸಾವಿ ಸಂಖ್ಯೆ ಕೆಲ ತಿಂಗಳ ನಂತರ ಮತ್ತೆ ಎರಡಂಕಿ ತಲುಪಿದೆ.
ಕಳೆದ 24 ತಾಸಿನಲ್ಲಿ ರಾಜ್ಯದಲ್ಲಿ 1445 ಜನರಿಗೆ ಸೊಂಕು ದೃಢ ಪಟ್ಟಿದೆ. 10 ಸೋಂಕಿತರು ಮೃತಪಟ್ಟಿದ್ದು,
ಬೆಂಗಳೂರು ನಗರ ದಲ್ಲಿನಾಲ್ವರು ಮೃತಪಟ್ಟಿದ್ದಾರೆ ದಕ್ಷಿಣ ಕನ್ನಡ ,ಧಾರವಾಡ, ಕಲಬುರಗಿ ಮೈಸೂರು, ತುಮಕೂರು ಹಾಗು ಉತ್ತರ ಕನ್ನಡದಲ್ಲಿ, ತಲಾ ಒಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. 661 ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿಯೂ ಹೊಸ ಸೋಂಕು ಪ್ರಕರಣಗಳು ನಿನ್ನೆಗಿಂತ ಕಡಿಮೆಯಾಗಿದೆ.ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 886 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ971647ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 14268 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12444 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 136 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಜಿಲ್ಲಾ ವಾರು ಸೊಂಕಿತರ ವಿವರ:
ಬಾಗಲಕೋಟೆ 07, ಬಳ್ಳಾರಿ 09, ಬೆಳಗಾವಿ 03, ಬೆಂಗಳೂರು ಗ್ರಾಮಾಂತರ 12, ಬೀದರ್ 51, ಚಾಮರಾಜನಗರ 03, ಚಿಕ್ಕಬಳ್ಳಾಪುರ 13, ಚಿಕ್ಕಮಗಳೂರು 01, ಚಿತ್ರದುರ್ಗ 06, ದಕ್ಷಿಣ ಕನ್ನಡ 31, ದಾವಣಗೆರೆ 08, ಧಾರವಾಡ 16, ಗದಗ 05, ಹಾಸನ 20, ಹಾವೇರಿ 02, ಕಲಬುರಗಿ 43, ಕೊಡಗು 23, ಕೋಲಾರ 22, ಕೊಪ್ಪಳ 01, ಮಂಡ್ಯ 28, ಮೈಸೂರು 61, ರಾಯಚೂರು 05, ರಾಮನಗರ 00, ಶಿವಮೊಗ್ಗ 05, ತುಮಕೂರು 51, ಉಡುಪಿ 113, ಉತ್ತರ ಕನ್ನಡ 07, ವಿಜಯಪುರ 10, ಯಾದಗಿರಿ 03.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement