ಕೇಂದ್ರದಿಂದ ಮಹತ್ವದ ಸೂಚನೆ: ಕೊವಿಶೀಲ್ಡ್‌ 2ನೇ ಡೋಸ್‌ ಅವಧಿ 6-8 ವಾರಗಳಿಗೆ ವಿಸ್ತರಿಸಿ ಎಂದು ರಾಜ್ಯಗಳಿಗೆ ಪತ್ರ

 

ನವ ದೆಹಲಿ: ಕೊವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದ ಬಳಿಕ ಎರಡನೇ ಡೋಸ್‌ ಪಡೆಯಲು ಇರುವ ಅವಧಿಯನ್ನು ಈಗಿನ 28 ದಿನಗಳ ಬದಲಾಗಿ 6-8 ವಾರಗಳಿಗೆ ಹೆಚ್ಚಿಸಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.
D.O Letter to CSs & copy to Health Secys of State

ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಾಜೇಶ ಭೂಷಣ್‌ ಈ ಕುರಿತು ಪತ್ರ ಬರೆದಿದ್ದಾರೆ. ಎರಡು ಡೋಸ್‌ಗಳ ನಡುವಿನ ಅವಧಿಯನ್ನು 6-8 ವಾರಗಳಿಗೆ ಹೆಚ್ಚಿಸಿದರೆ ಸೋಂಕಿನಿಂದ ಸಂರಕ್ಷಣೆ ಹೆಚ್ಚುತ್ತದೆ.
ಈಗ ಮೊದಲ ಡೋಸ್‌ ಪಡೆದವರು 28 ದಿನಗಳ ಬಳಿಕ ಎರಡನೇ ಡೋಸ್‌ ಪಡೆಯುತ್ತಾರೆ. ಆದರೆ, ಈ ಅವಧಿಯನ್ನು 6ರಿಂದ 8 ವಾರಗಳಿಗೆ ಹೆಚ್ಚಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ಸಲಹೆಯಾಗಿದೆ. ಆದರೆ, ಈ ಡೋಸ್‌ ನೀಡುವಿಕೆಯ ಅವಧಿ ವಿಸ್ತರಣೆ ಸೀರಂ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯಾ ತಯಾರಿಸಿರುವ “ಕೊವಿಶೀಲ್ಡ್‌’ ಲಸಿಕೆಗೆ ಮಾತ್ರ ಅನ್ವಯವಾಗುತ್ತದೆ. ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ಗೆ ಇದು ಅನ್ವಯವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
6 ಮತ್ತು 8 ವಾರಗಳ ಅವಧಿಯಲ್ಲಿ 2ನೇ ಡೋಸ್‌ ನೀಡಿದರೆ ಸೋಂಕಿನಿಂದ ಹೆಚ್ಚು ಸುರಕ್ಷತೆ ಸಿಗಲಿದೆ ಎನ್ನುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಈ ಅವಧಿ ವಿಸ್ತರಣೆ 8 ವಾರಗಳನ್ನೂ ದಾಟುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement