ರಷ್ಯಾದ ಸ್ಪುಟ್ನಿಕ್ ವಿ 200 ಮಿಲಿಯನ್ ಕೊರೊನಾ ಡೋಸ್‌ ತಯಾರಿಸಲಿರುವ ಭಾರತದ ವಿರ್ಚೋ ಗ್ರೂಪ್

ಮಾಸ್ಕೋ: ವರ್ಷದೊಳಗೆ 200 ಮಿಲಿಯನ್ ಡೋಸ್ ಕೊರೋನಾ ಲಸಿಕೆ ಉತ್ಪಾದನೆಗಾಗಿ ಭಾರತೀಯ ಮೂಲದ ಔಷಧ ಸಂಸ್ಥೆ ಒಂದರ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ರಷ್ಯಾದ ಸ್ಪುಟ್ನಿಕ್ ವಿ. ಕೊವಿಡ್‌ ಲಸಿಕೆಯ ಪಾಲುದಾರ ಸಂಸ್ಥೆ ಸೋಮವಾರ ಹೇಳಿದೆ.
ಭಾರತದಲ್ಲಿ ಪ್ರತಿ ವರ್ಷ 200 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆಗೆ ವಿರ್ಚೋ ಗ್ರೂಪ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ದೇಶದ ಸಾರ್ವಜನಿಕ ಆರ್ಥಿಕ ನಿಧಿ ರಷ್ಯದ ನೇರ ಹೊಡಿಕೆ ಫಂಡ್ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ಮತ್ತೊಂದು ಔಷಧ ತಯಾರಿಕಾ ಕಂಪನಿ ಸ್ಟೆಲಿಸ್ ಬಯೋಫಾರ್ಮ್ ದೊಂದಿಗೆ 200 ಮಿಲಿಯನ್ ಸ್ಫುಟ್ನಿಕ್ ವಿ ಕೋವಿಡ್-19 ಲಸಿಕೆ ತಯಾರಿಸಲು ಒಪ್ಪಂದ ಮಾಡಿಕೊಂಡಿರುವ ವಿಚಾರವನ್ನು ಆರ್ ಡಿಐಎಫ್ ಕಳೆದ ವಾರ ಪ್ರಕಟಿಸಿತ್ತು

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

ನಿಮ್ಮ ಕಾಮೆಂಟ್ ಬರೆಯಿರಿ

advertisement