67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ, ಕಂಗನಾ ಅತ್ಯುತ್ತಮ ನಟಿ, ಧನುಷ್‌-ಮನೋಜ ಬಾಜಪೇಯಿ ಅತ್ಯುತ್ತಮ ನಟರು

ನವ ದೆಹಲಿ; 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ‘ಮಣಿಕರ್ಣಿಕಾ’ ಹಾಗೂ ‘ಪಂಗಾ’ ಚಿತ್ರದ ನಟನೆಗೆ ಈ ಬಾರಿ ಪ್ರಶಸ್ತಿ ನಟಿ ಕಂಗನಾ ರನೌತ್​ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ಹಂಚಿಕೊಂಡಿದ್ದಾರೆ. ಧನುಷ್, ಮನೋಜ್ ಬಾಜ್ಪೇಯಿ ಈ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಹಿಂದಿ ಚಿತ್ರ ಸುಶಾಂತ್​ ಸಿಂಗ್​ ರಜಪೂತ್​ ಅವರ ಚಿಂಚೋರೆ ಚಿತ್ರ ಪಡೆದಿದೆ.
ಅತ್ಯುತ್ತಮ ಚಿತ್ರ : ಮರಕ್ಕರ್​- ಅರಬಿಕಾಡಾಲಿಂಟೆ-ಸಿಂಹಂ

ಅತ್ಯುತ್ತಮ ನಟ: ಅಸುರನ್​ ಸಿನಿಮಾಗಾಗಿ ಧನುಷ್​, ಭೋನ್ಸಲೆ ಚಿತ್ರಕ್ಕಾಗಿ ಮನೋಜ್​ ಬಾಜ್ಪೇಜಿ

ಅತ್ಯುತ್ತಮ ನಟಿ: ಪಂಕಾ ಮತ್ತು ಮಣಿಕರ್ಣಿಕ ಚಿತ್ರಕ್ಕಾಗಿ ನಟಿ ಕಂಗನಾ ರನೌತ್​

ಅತ್ಯುತ್ತಮ ಸಹಾಯಕ ನಟ: ಸೂಪರ್​ ಡಿಲಕ್ಸ್​ ಚಿತ್ರಕ್ಕಾಗಿ ನಟ ವಿಜಯ್​ ಸೇತುಪತಿ

ಅತ್ಯುತ್ತಮ ಸಹಾಯಕ ನಟಿ: ದಿ ತಾಷ್ಕೆಂಟ್‌ ಫೈಲ್ಸ್​ ಚಿತ್ರಕ್ಕಾಗಿ ನಟಿ ಪಲ್ಲವಿ ಜೋಷಿ

ಅತ್ಯುತ್ತಮ ನಿರ್ದೇಶಕ:  ಬಹತಾರ್​ ಹುರೈನ್​​ ಹುರೈನ್​ ಚಿತ್ರಕ್ಕಾಗಿ ಸಂಜಯ ಪೂರನ್‌​ ಸಿಂಗ್​ ಚೌಹಾನ್

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

ಅತ್ಯುತ್ತಮ ಹಿಂದಿ ಚಿತ್ರ : ಚಿಚೋರೆ

ಅತ್ಯುತ್ತಮ ಕನ್ನಡ ಚಿತ್ರ : ಅಕ್ಷಿ

ಅತ್ಯುತ್ತಮ ತುಳು ಚಿತ್ರ: ಪಿಂಗಾರ

ಅತ್ಯುತ್ತಮ ಬೆಂಗಾಲಿ ಚಿತ್ರ: ಗುಮ್ನಾಮಿ

ಅತ್ಯುತ್ತಮ ತೆಲುಗು ಚಿತ್ರ: ಜೆರ್ಸಿ

ಅತ್ಯುತ್ತಮ ತಮಿಳು ಚಿತ್ರ: ಅಸುರನ್​

ಅತ್ಯುತ್ತಮ ಮಲಯಾಳಂ ಚಿತ್ರ: ಸಕಲ್ಲ ನೊಟ್ಟಂ

ಅತ್ಯುತ್ತಮ ಸಾಹಸ ನಿರ್ದೇಶನ: ಅವನೇ ಶ್ರೀಮನ್ನಾರಾಯಣ

ಅತ್ಯುತ್ತಮ ಸಾಹಸ ನಿರ್ದೇಶನ: ತೆಲುಗು: ಮಹರ್ಷಿ

ನಾನ್​ ಫೀಚರ್​ ಫಿಲ್ಮ್​ ವಿಭಾಗದಲ್ಲಿ ಅತ್ಯುತ್ತಮ ನಿರೂಪಣೆಗಾಗಿ ಸರ್​ ಡೇವಿಡ್​ ಅಟೆಂನೋರ್ಗ್​ ಅವರ ವೈಲ್ಡ್​ ಕರ್ನಾಟಕ ಚಿತ್ರ ಪ್ರಶಸ್ತಿ ಪಡೆದಿದೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement