ಖ್ಯಾತ ಬಾಲಿವುಡ್‌ ನಟ ಗೋವಿಂದ ಹಾಡಿದ ರಾಜಕುಮಾರ ಸಿನೆಮಾದ ಹಾಡಿನ ತುಣುಕಿನ ವಿಡಿಯೋ ಈಗ ವೈರಲ್‌..!

ಕನ್ನಡಕ್ಕೂ ಹಿಂದಿ ಸಿನೆಮಾ ನಟ ಗೋವಿಂದ ಅವರಿಗೂ ಎಲ್ಲಿಯ ನಂಟು? ಡಾ. ರಾಜಕುಮಾರ ಅವರ ಅಭಿಮಾನಿಯಾಗಿರುವ ಅವರು ಡಾ.ರಾಜ್‌ಕುಮಾರ ಸಿನೆಮಾದ ಹಾಡಿನ ಸಾಲನ್ನು ಸ್ಫುಟವಾಗಿ ಹಾಡಿರುವ ವಿಡಿಯೋ ಈಗ ವೈರಲ್‌ ಆಗಿದೆ.
1974ರ ಎರಡು ಕನಸು ಸಿನೆಮಾದ ಎಂದೆಂದೂ ನಿನ್ನನು ಮರೆತು ನಾನಿರಲಾರೆ…ಈ ಹಾಡನ್ನು ಹಾಡಿರುವ 57 ವರ್ಷದ ಬಾಲಿವುಡ್‌ನ ಖ್ಯಾತ ನಟ ಗೋವಿಂದಅವರ ವಿಡಿಯೋ ಈಗ ವೈರಲ್ ಆಗಿದೆ. ಅವರನ್ನು ಹಾಡುವಂತೆ ಪ್ರೇರೇಪಿಸಿದ ಶ್ರೇಯಸ್ಸು ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಸಲ್ಲುತ್ತದೆ.
ಹರ್ಷಿಕಾ ಪೂಣಚ್ಚ ಹಾಗೂ ಗೋವಿಂದ ಪ್ರಸ್ತುತ ಭೋಜ್‌ಪುರಿ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿರಾಮದ ಸಮಯದಲ್ಲಿ, ನಟಿ ಹರ್ಷಿಕಾ ಪೂಣಚ್ಚ ಕನ್ನಡದ ಹಾಡು ಹಾಡಲು ವಿನಂತಿಸಿದಾಗ ಗೋವಿಂದ ತಕ್ಷಣವೇ ರಾಜಕುಮಾರ ಅವರ ಎರಡು ಕನಸು ಸಿನೆಮಾದ ಹಾಡಿನ ಎರಡು ಸಾಲನ್ನು ಹಾಡಿದ್ದಾರೆ.


ಈ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ತಮ್ಮ ಇನ್ಸ್ಟಾಗ್ರಾಮಿನಲ್ಲಿ ಬರೆದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಮೂಲತಃ, ಪಿ.ಬಿ.ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಅವರು ಚಿ ಉದಯ ಶಂಕರ್ ಬರೆದ ಸಾಹಿತ್ಯಕ್ಕೆ ಧ್ವನಿ ನೀಡಿದ್ದರು.ಆದರೆ, ಗೋವಿಂದ ಅವರು ಈ ಹಾಡನ್ನು ಹಾಡಿದ್ದು ಇದೇ ಮೊದಲಲ್ಲ. ಈ ಮೊದಲು ಅವರು ಹಿಂದಿ ಕಾರ್ಯಕ್ರಮವೊಂದರಲ್ಲಿ ಹಾಡಿದ್ದರು.

4.2 / 5. 6

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬಂಟ್ವಾಳ | ಶಾಲಾ ಬಸ್ ಮೇಲೆ ಮರ ಬಿದ್ದು ಯುಕೆಜಿ ಬಾಲಕಿ ಸಾವು; ಕೆಲವರಿಗೆ ಗಾಯ

ನಿಮ್ಮ ಕಾಮೆಂಟ್ ಬರೆಯಿರಿ

advertisement