ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಬುಧವಾರವೂ ಹೆಚ್ಚಳ..

ಬೆಂಗಳೂರು : ಕರ್ನಾಟಕದಲ್ಲಿ ಬೂದವಾರವೂ ಕೊರೊನಾ ಪ್ರಕರನ ಹೆಚ್ಚಳ ಕಂಡಿದೆ. ಕಳೆದ 24 ತಾಸಿನಲ್ಲಿ ಬರೋಬ್ಬರಿ 2,298 ಕೊರೊನಾ ಸೋಂಕು ದಾಖಲಾಗಿದೆ..
ಸೋಂಕಿನಿಂದ 12 ಜನ ಮೃತಪಟ್ಟಿದ್ದು, ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 12,461ಕ್ಕೆ ಏರಿದೆ.ರಾಜ್ಯದಲ್ಲಿ ಒಟ್ಟು ಕೊರಪೊನಾ ಸೋಂಕಿತರ ಸಂಖ್ಯೆ 9,75,955 ಕ್ಕೆ ಏರಿದೆ. ಬುಧವಾರ 995 ಗುಣಮುಖರಾಗಿದ್ದು, ಸೋಂಕಿನ ಸಕ್ರಿಯ ಪ್ರಕರಣಗಳು 16,886 ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಮಾಹಿತಿ: ಬಾಗಲಕೋಟೆ 20, ಬಳ್ಳಾರಿ 34, ಬೆಳಗಾವಿ 14, ಬೆಂಗಳೂರು ಗ್ರಾಮಾಂತರ 37, ಬೆಂಗಳೂರು ನಗರ 1,398, ಬೀದರ್ 82, ಚಾಮರಾಜನಗರ 5, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 14, ಚಿತ್ರದುರ್ಗ 13, ದಕ್ಷಿಣ ಕನ್ನಡ 54, ದಾವಣಗೆರೆ 8, ಧಾರವಾಡ 38, ಗದಗ 8, ಹಾಸನ 60, ಹಾವೇರಿ 1, ಕಲಬುರಗಿ 118, ಕೊಡಗು 15, ಕೋಲಾರ 25, ಕೊಪ್ಪಳ 6, ಮಂಡ್ಯ 15, ಮೈಸೂರು 74, ರಾಯಚೂರು 12, ರಾಮನಗರ 2, ಶಿವಮೊಗ್ಗ 12, ತುಮಕೂರು 94, ಉಡುಪಿ 79, ಉತ್ತರಕನ್ನಡ 10, ವಿಜಯಪುರ 37, ಯಾದಗಿರಿ 5.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement