ಪಶ್ಚಿಮ ಬಂಗಾಳದಲ್ಲಿ ಎನ್‌ ‌ಆರ್‌ಸಿ, ಎನ್‌ಪಿಆರ್‌ ಅನುಷ್ಠಾನಕ್ಕೆ ಅವಕಾಶ ನೀಡಲ್ಲ: ಮಮತಾ

ಬಂಕುರಾ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಹಾಗೂ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಅಬ್ಬರಿಸಿದ್ದಾರೆ.
ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದೀದಿ, ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನಲ್ಲಿ 14 ಲಕ್ಷ ಬಂಗಾಳಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಆದರೆ ನಾನು ಅಧಿಕಾರದಲ್ಲಿದ್ದರೆ ನಾನು ಅದನ್ನು ಮಾಡುವುದಿಲ್ಲ. ಎನ್‌ಪಿಆರ್, ಎನ್‌ಆರ್‌ಸಿಯನ್ನು ಬಂಗಾಳದಲ್ಲಿ ಜಾರಿಗೆ ತರಲು ಎಂದಿಗೂ ಬಿಡುವುದಿಲ್ಲ ಎಂದು ನುಡಿದರು.
ನೀವು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದಾಗ ನಾನು ದುಃಖಿತಳಾಗಿದ್ದೆ. ಬಿಜೆಪಿ ಇತರ ಸ್ಥಳಗಳಿಂದ ಗೂಂಡಾಗಳನ್ನು ಕರೆತಂದು ಬಂಗಾಳವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಾನು ನಿಮ್ಮನ್ನು ತಲುಪಲು ಸಾಧ್ಯವಾಗದಂತೆ ಅವರು ನನ್ನ ಕಾಲಿಗೆ ಗಾಯ ಮಾಡಿದರು. ಆದರೆ ನಾನು ನಾನು ನಿರ್ಭೀತ ವ್ಯಕ್ತಿ, ನನ್ನನ್ನು ಸುಲಭವಾಗಿ ಹೆದರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮತ ಎಣಿಕೆಯ ಸಮಯದಲ್ಲಿ ಪೊಲೀಸರು ತಪ್ಪಿನಲ್ಲಿ ಪಾಲ್ಗೊಳ್ಳಲು ಬಿಡಬೇಡಿ ಎಂದು ಜನರನ್ನು ಒತ್ತಾಯಿಸಿದ ಅವರು, ಅಕ್ರಮ ಕೃತ್ಯವನ್ನು ಪತ್ತೆ ಮಾಡುವವರಿಗೆ ಬಹುಮಾನ ಮತ್ತು ಉದ್ಯೋಗವನ್ನೂ ಘೋಷಿಸಿದರು.
294 ಸದಸ್ಯರ ರಾಜ್ಯ ವಿಧಾನಸಭೆಗೆ ಚುನಾವಣೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 29 ರಿಂದ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement