ಇಂಥ ಹತ್ತು ಸಿಡಿ ಬಿಡುಗಡೆ ಮಾಡಿದರೂ ಎದುರಿಸಲು ಸಿದ್ಧ:ರಮೇಶ ಜಾರಕಿಹೊಳಿ

ಬೆಂಗಳೂರು: ಒಂದಲ್ಲ ಇನ್ನೂ ಇಂಥ ಹತ್ತು ಸಿಡಿ ಬಿಡುಗಡೆ ಮಾಡಿದರೂ ಎದುರಿಸಲು ಸಿದ್ಧ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಷಡ್ಯಂತ್ರದ ಆರೋಪದಿಂದ ಮುಕ್ತನಾಗಿ ಹೊರಗೆ ಬರುತ್ತೇನೆ ಎಂಬ ವಿಶ್ವಾಸವಿದೆ  ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಳಿಯೂ ಮಹತ್ವದ ಸಾಕ್ಷ್ಯಗಳಿವೆ. ಅದನ್ನು ಬಿಡುಗಡೆ ಮಾಡಿದರೆ ಎಲ್ಲರೂ ಶಾಕ್ ಆಗುತ್ತೀರಿ. ಸಂದರ್ಭ ಬಂದಾಗ ಅದನ್ನು ಹೊರತರುತ್ತೇನೆ ಎಂದು ಹೇಳಿದ್ದಾರೆ.
ಯುವತಿಯ ಸಿಡಿ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿ, ಈ ಸಿಡಿ ಬಿಡುಗಡೆಯಿಂದ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಸಾಕಷ್ಟು ದೊಡ್ಡ ಸಂಚು ರೂಪಿಸಿಯೇ ನನ್ನ ಸಿಲುಕಿಸಲು ಪ್ರಯತ್ನ ನಡೆಸಲಾಗಿದೆ. ಆದರೆ ನಾನು ಹೆದರುವುದಿಲ್ಲ. ಇನ್ನೂ ಇಂಥ ಹತ್ತು ಸಿಡಿ ಬಿಡುಗಡೆ ಮಾಡಿದರೂ ನಾನು ಎದುರಿಸುತ್ತೇನೆ.ಹಿಂದೆ ಇರುವವರನ್ನು ಜೈಲಿಗೆ ಕಳುಹಿಸದೇ ಬಿಡಲ್ಲ. ಎಂದು ಹೇಳಿದರು.
ಹಿಂದೆ ನಾನು ದೂರು ಕೊಟ್ಟು ಅರ್ಧ ತಾಸಿನ ಬಳಿಕ ಸಿಡಿ ಬಿಡುಗಡೆಯಾಗಿದೆ. ಆದರೂ ಯುವತಿ ಸುಳಿವಿಲ್ಲ. ಈಗ ಮತ್ತೊಂದು ಹೇಳಿಕೆಯಿರುವ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಇದನ್ನು ಗಮನಿಸಿದರೆ ಆಕೆ ಯಾರದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ಅನಿಸುತ್ತದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಅಪಾರ ಗೌರವ ಇತ್ತು. ಆದರೆ ಅವರ ಹೇಳಿಕೆಗಳನ್ನು ನೋಡಿ ನನಗೆ ಶಾಕ್ ಆಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಮೂವರು ಸಾವು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement