ಬಸವ ಕಲ್ಯಾಣ: ಯುವತಿ ಯಾರದ್ದೋ ಕುತಂತ್ರಕ್ಕೆ ಸಿಲುಕಿ ಬಲವಂತವಾಗಿ ವಿಡಿಯೋ ಬಿಡುಗಡೆ ಮಾಡುತ್ತಿದ್ದಾಳೆ.
ನೀವು ಯಾರದೋ ಬಲವಂತಕ್ಕೆ ಒಳಗಾಗಿ ಗುಪ್ತವಾಗಿ ವಿಡಿಯೋ ಮಾಡಿ ಹೇಳಿಕೆಗಳನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ಹೊರ ಬನ್ನಿ ಎಂದು ನಾನು ಆ ಹೆಣ್ಣು ಮಗಳಿಗೆ ಮನವಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಸವ ಕಲ್ಯಾಣದಲ್ಲಿ ಸಿಡಿ ಪ್ರಕರಣದ ಯುವತಿಯದ್ದು ಎನ್ನಲಾದ ಹೇಳಿಕೆಯುಳ್ಳ ಎರಡನೇ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲವೆಂದಾದರೆ ವಿಪಕ್ಷ ನಾಯಕ ಅಥವಾ ಇಲ್ಲವೇ ಪ್ರಧಾನಿ ಬಳಿ ಮನವಿ ಮಾಡಿ ರಕ್ಷಣೆ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಪಾಪ ಆ ಯುವತಿ ಯಾರದ್ದೋ ಕುತಂತ್ರಕ್ಕೆ ಒಳಗಾಗಿದ್ದಾಳೆ ಎಂದು ಅನಿಸುತ್ತದೆ. ಹಾಗಾಗಿ ಆ ಹೆಣ್ಣು ಮಗಳಿಗೆ ಬಳಿ ನಾನು ಹೇಳುವುದು ಇಷ್ಟೇ, ನೀವು ಯಾರದೋ ಒತ್ತಡಕ್ಕೆ ಒಳಗಾಗಿ ಗುಪ್ತ ಸ್ಥಳಗಳಲ್ಲಿ ಕುಳಿತು ವಿಡಿಯೋ ಮಾಡಿ ಬಿಡುಗಡೆ ಮಾಡಿ ಮಾತನಾಡುವುದು ಬೇಡ. ನಿಮ್ಮ ತಂದೆ ತಾಯಿಗೆ ರಕ್ಷಣೆ ಸಿಗಬೇಕು. ಅದಕ್ಕೆ ನಿಮಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲವೆಂದಾದರೆ . ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ರಕ್ಷಣೆ ಪಡೆಯಿರು. ಆದರೆ ಗುಪ್ತ ಸ್ಥಳದಿಂದ ಹೊರಬನ್ನಿ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ