ಅಯೋಧ್ಯಾ ರಾಮಮಂದಿರಕ್ಕೆ ೧೭ ಕೋಟಿ ರೂ. ದೇಣಿಗೆ ನೀಡಿದ ಜಮ್ಮು-ಕಾಶ್ಮೀರ ಜನರು

ಶ್ರೀನಗರ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಜಮ್ಮು-ಕಾಶ್ಮೀರದ ಜನರು ೧೭ ಕೋಟಿ ರೂ. ದೇಣಿಗೆ ನೀಡಿದ್ದಾರೆ.
೪೪ ದಿನಗಳ ಕಾಲ ನಡೆದ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನದಲ್ಲಿ ೨೧,೩೩೧ ಕಾರ್ಯಕರ್ತರು ೪೬೯೩ ಗ್ರಾಮಗಳು ಹಾಗೂ ಪಟ್ಟಣಗಳ ೬.೩೭ ಲಕ್ಷ ಮನೆಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸಿದರು ಎಂದು ಆರ್‌ಎಸ್‌ಎಸ್‌ ಪ್ರಾಂತ ಸಹ ಸಂಘಚಾಲಕ ಗೌತಮ್‌ ಮೆಂಗಿ ತಿಳಿಸಿದ್ದಾರೆ.
ಕೊವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಜಮ್ಮು-ಕಾಶ್ಮೀರದ ೨೯೦೨ ಗ್ರಾಮ ಹಾಗೂ ಪಟ್ಟಣಗಳ ಜನರಿಗೆ ೧.೯೮ ಲಕ್ಷ ಆಹಾರದ ಪೊಟ್ಟಣ, ೪೫೬೭ ಸ್ಯಾನಿಟೈಜರ್‌, ೧.೩೬ ಲಕ್ಷ ಮಾಸ್ಕ್‌ಗಳು ಹಾಗೂ ೫೮೦೦೦ ಪಡಿತರ ಕಿಟ್‌ ವಿತರಿಸಿದ್ದರು. ರಾಮಮಂದಿರ ನಿಧಿ ಸಂಗ್ರಹ ಅಭಿಯಾನ ಜನವರಿ ೧೫ರಿಂದ ಆರಂಭಗೊಂಡು ಫೆಬ್ರವರಿ ೨೭ಕ್ಕೆ ಕೊನೆಗೊಂಡಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

ನಿಮ್ಮ ಕಾಮೆಂಟ್ ಬರೆಯಿರಿ

advertisement