ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ: ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಸಂಪರ್ಕ ರಸ್ತೆಗಳು ಬಂದ್‌

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾಪ್ರಕರಣಗಳ ದಾಖಲೆ ಮಟ್ಟದಲ್ಲಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯದ ರಸ್ತೆಗಳಿಗೆ ಮುಳ್ಳು ಹಾಕಿ ರಸ್ತೆ ಬಂದ್ ಮಾಡಿದ್ದಾರೆ.
ಚಿಕ್ಕೋಡಿ, ಅಥಣಿ ಹಾಗೂ ಕಾಗವಾಡ ತಾಲೂಕಿನ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಿದೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ – ದಾನವಾಡ, ಯಕ್ಸಂಬಾ – ದತ್ತವಾಡ, ಮಲಿಕವಾಡ – ದತ್ತವಾಡ ಹಾಗೂ ಸದಲಗಾ – ದತ್ತವಾಡ ರಸ್ತೆಗಳನ್ನು ಸಹ ಚಿಕ್ಕೋಡಿ ತಾಲೂಕಾಡಳಿತ ಬಂದ್‌ ಮಾಡಿದೆ.ಕಾಗವಾಡ ಚಕ್ ಪೋಸ್ಟ್ ಹಾಗೂ ಕುಗನೊಳ್ಳಿ ಚಕ್ ಪೋಸ್ಟ್ ದಾರಿಯಿಂದಲೇ ಬರುವಂತೆ ಸೂಚನೆ ನೀಡಲಾಗಿದೆ. ಆರ್ ಟಿ -ಪಿಸಿಆರ್ ನೆಗೆಟಿವ್‌ ಟೆಸ್ಟ್ ರಿಪೋರ್ಟ್ ಇದ್ದರೆ ಮಾತ್ರ ಕಾಗವಾಡ ಹಾಗೂ ಕೊಗನೊಳ್ಳಿ ಈ ಎರಡು ಟೋಲ್ ಗಳ ಮೂಲಕ ರಾಜ್ಯ ಪ್ರವೇಶಕ್ಕೆ ಅನುವತಿ ನೀಡಲಾಗುತ್ತಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement