12 ವರ್ಷ ಒಳಗಿನ ಮಕ್ಕಳಿಗೂ ಕೊವಿಡ್‌ ಲಸಿಕೆ: ಅಮೆರಿಕದಲ್ಲಿ ಪ್ರಯೋಗ ಶುರು

ಫಿಜರ್ ಇಂಕ್ ಹಾಗೂ ಜರ್ಮನ್ ಪಾಲುದಾರ ಬಯೋಟೆಕ್ ಎಸ್‌ಇ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಿದೆʼ
ಹೀಗೆಂದು ಅಮೆರಿಕಾದ ಔಷಧಿ ಕಂಪನಿ ಫಿಜರ್ ಹೇಳಿದೆ. ಬುಧವಾರ,ಮೊದಲ ಬ್ಯಾಚ್ ಮಕ್ಕಳಿಗೆ ಚುಚ್ಚು ಮದ್ದು ನೀಡಲಾಗಿದ್ದು, 12 ವರ್ಷ ಒಳಗಿನ ಹಾಗೂ 6 ತಿಂಗಳಿನ ಮೇಲಿನ ಮಕ್ಕಳಿಗೆ ಈ ಲಸಿಕೆ ಪ್ರಯೋಗ ನಡೆಯುತ್ತಿದೆ. ಹಿಂದಿನ ತಿಂಗಳು ಮಾಡರ್ನಾ ಇಂಕ್, 12 ವರ್ಷ ಕೆಳಗಿನ ಮಕ್ಕಳಿಗೆ ಪ್ರಯೋಗ ಶುರು ಮಾಡಿದೆ. ಈಗ ಫಿಜರ್‌ ಅರಂಭಿಸಿದೆ. 2022 ರ ಆರಂಭದ ಹೊತ್ತಿಗೆ ಇವರಿಗೂ ಕೊರೊನಾ ಲಸಿಕೆ ಲಭ್ಯವಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಫಿಜರ್-ಬಯೋಟೆಕ್‌ನ ಕೊರೊನಾ ಲಸಿಕೆ ಪ್ರಯೋಗ ನಡೆಸಲು ಅಮರಿಕದ ರೆಗ್ಯೂಲೆಟರ್ಸ್ ಅನುಮೋದನೆ ನೀಡಿತ್ತು. ಈವರೆಗೆ ಅಮೆರಿಕಾದಲ್ಲಿ 6.6 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ.

 

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement