ಎಸ್‌ಐಟಿ ಮುಂದೆ ಸಿಡಿ ಯುವತಿ ತಂದೆ-ತಾಯಿ ಹಾಜರು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಕ್ಷಣಕ್ಷಣಕ್ಕೂ ತಿರುವು ಪಡೆದುಲಕೊಳ್ಳುತ್ತಿದೆ.
ಶನಿವಾರ ಬೆಳಿಗ್ಗೆ ಸಿಡಿಯಲ್ಲಿದ್ದ ಯುವತಿಯ ಹೇಳಿಕೆಯುಳ್ಳ ವಿಡಿಯೋ ಬಿಡಗಡೆಯಾಗಿ ಅದರಲ್ಲಿ ತಮ್ಮ ಕುಟುಂಬಕ್ಕೆ ರಕ್ಷಣೆ ಕೋರಿದ ಬೆನ್ನಲ್ಲೇ ಯುವತಿಯ ಪೋಷಕರು ವಿಶೇಷ ತನಿಖಾ ದಳದ ಮುಂದೆ ಶನಿವಾರ ಹಾಜರಾಗಿದ್ದು, ಪ್ರಕರಣ ಮತ್ತೊಂದು ಟ್ವಿಸ್ಟ್‌ ಪಡೆದಿದೆ.

ಅಜ್ಞಾತ ಸ್ಥಳದಲ್ಲಿರುವ ಯುವತಿ ಶನಿವಾರ ಮುಂಜಾನೆ ನಾಲ್ಕನೇ ವಿಡಿಯೋ ಬಿಡುಗಡೆ ಮಾಡಿದ್ದು, ಎಸ್‍ಐಟಿ ಮುಂದೆ ನಾನು ಹಾಜರಾಗಿ ಹೇಳಿಕೆ ನೀಡುವ ವೇಳೆ ನನ್ನ ಅಪ್ಪ, ಅಮ್ಮ, ಅಜ್ಜಿ, ಇಬ್ಬರು ತಮ್ಮಂದಿರು ನನ್ನ ಕಣ್ಣೆದುರು ಇರಬೇಕು ಎಂದಿದ್ದಳು. ಅದಾದ ಕೆಲವೇ ಗಂಟೆಗಳಲ್ಲಿ ಯುವತಿಯ ತಂದೆ ತಾಯಿಯವರು ಬೆಂಗಳೂರಿನಲ್ಲಿರುವ ಮಡಿವಾಳ ಟೆಕ್ನಿಕಲ್ ಸೆಂಟರಿಗೆ ಬಂದು ಎಸ್‍ಐಟಿ ಮುಂದೆ ಹಾಜರಾಗಿದ್ದಾರೆ. ಅವರನ್ನು ಸುಮಾರು ಮೂರು ತಾಸುಗಳ ಕಾಲ ವಿಚಾರಣೆ ನಡೆಸಲಾಗಿದೆ. ಅವರನ್ನು ಹಲವು ವಿಚಾರಗಳಿಗೆ ಎಸ್‌ಐಟಿ ಪ್ರಶ್ನಿಸಿದೆ. ತಮ್ಮ ಮಗಳನ್ನು ಹುಡುಕಿಕೊಡಿ ಎಂದು ಹೇಳಿದ ತಂದೆ-ತಾಯಿ ಕಣ್ಣಿರು ಹಾಕಿದ್ದಾರೆ.

ಪ್ರಕರಣ ಟ್ವಿಸ್ಟ್‌ ಪಡೆಯುತ್ತ ಸಾಗಿ ಬಂತು..:ಮಾರ್ಚ್ 2ರಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ನಗರ ಪೋಲೀಸ್ ಆಯುಕ್ತರಿಗೆ  ರಮೇಶ ಜಾರಕಿಹೊಳಿ ವಿರುದ್ಧ ನೀಡಿದ್ದರು. ಅದರ ಬೆನ್ನಲ್ಲೇ ಸಿಡಿ ಬಿಡುಗಡೆಯಾಗಿ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಂತರ ಕಲ್ಲಹಳ್ಳಿ ತಮ್ಮ ದೂರು ಹಿಂಪಡೆದಿದ್ದರು.
ಈ ನಡುವೆ ಯುವತಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ರಮೇಶ್ ಜಾರಕಿಹೊಳಿ ಕೆಲಸ ಕೊಡಿಸುವುದಾಗಿ ಹೇಳಿ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ತಮ್ಮ ಆಪ್ತ ಮಾಜಿ ಶಾಸಕ ನಾಗರಾಜ್ ಅವರ ಮೂಲಕ ಕಬ್ಬನ್‍ಪಾರ್ಕ್‍ಗೆ ದೂರು ನೀಡಿ ತಮ್ಮ ತೇಜೋವಧೆ ಮಾಡಲು ಸಂಚು ನಡೆದಿದೆ ಎಂದು ದೂರು ನೀಡಿದ್ದರು.
ನಂತರದಲ್ಲಿ ಯುವತಿಯ ಪೋಷಕರು ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿ ನಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ತಿಳಿಸಿದ್ದರು. ಅದರ ಬೆನ್ನಲ್ಲೆ ಯುವತಿ ಮತ್ತೊಂದು ವಿಡಿಯೋ ಕಳುಹಿಸಿ ನನ್ನನ್ನು ಯಾರು ಅಪಹರಣ ಮಾಡಿಲ್ಲ, ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದರು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

ಮತ್ತೆ ಮೂರನೇ ವಿಡಿಯೋ ಬಿಡುಗಡೆ ಮಾಡಿ ರಮೇಶ್ ಜಾರಕಿಹೊಳಿ ವಿರುದ್ದ ನೇರ ಆರೋಪ ಮಾಡಿ ಅವರ ವಿರುದ್ಧ ನನಗೆ ಪರಿಚಿತರಾಗಿರುವ ವಕೀಲ ಜಗದೀಶ್ ಅವರ ಮೂಲಕ ದೂರು ಕೊಡುತ್ತಿರುವುದಾಗಿ ಹೇಳಿದರು. ಅದರಂತೆ ಸ್ವ ಹಸ್ತಾಕ್ಷರದಲ್ಲಿರುವ ದೂರನ್ನು ವಕೀಲ ಜಗದೀಶ್ ಅವರಿಗೆ ಕಳುಹಿಸಿ ಕೊಟ್ಟಿದ್ದು, ಜಗದೀಶ ಅವರು ಶುಕ್ರವಾರ ಮಧ್ಯಾಹ್ನ ನಗರ ಪೋಲೀಸ್ ಆಯುಕ್ತರಿಗೆ ನೀಡಿದ್ದರು. ಕಬ್ಬನ್‍ಪಾಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜೆಯ ವೇಳೆಗೆ ಆಡಿಯೋ ಬಿಡುಗಡೆಯಾಗಿದ್ದು ಪ್ರಕರಣ ಮತ್ತೊಂದು ತಿರುವು ಪಡೆದಿತ್ತು. ಅದರಲ್ಲಿ ಯುವತಿ ತಮ್ಮ ಮನೆಯವರ ಬಳಿ ಮಾತನಾಡುತ್ತಾ ಸಿಡಿಯಲ್ಲಿರುವುದು ನಾನಲ್ಲ. ಅದಲ್ಲಾ ಸುಳ್ಳು ಎಂದಿದ್ದಳು. ಈ ಬಗ್ಗೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಳು.
ಇದರ ಬೆನ್ನಲ್ಲೇ ಮಾಧ್ಯಮದರೊಂದಿಗೆ ಮಾತನಾಡಿದ್ದ ರಮೇಶ ಜಾರಕಿಹೊಳಿ ಈ ಪ್ರಕರಣದ ಬಗ್ಗೆ ಶನಿವಾರ ಸಂಜೆ ಒಂದು ಹೊಸ ಬಾಂಬ್‌ ಸ್ಪೋಟಿಸುವುದಾಗಿ ಹೇಳಿದ್ದರು. ಆಡಿಯೋದಲ್ಲಿರುವ ಧ್ವನಿ ಮತ್ತು ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಯ ಧ್ವನಿ ಒಂದೇ ಆಗಿದ್ದರೆ ಪ್ರಕರಣವೇ ಇತ್ಯರ್ಥವಾದಂತಾಗುತ್ತದೆ ಎಂದು ರಮೇಶ್ ಜಾರಕಿಹೊಳಿ ಅವರ ಸಹೋದರರೂ ಆಗಿರುವ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ಶನಿವಾರ ಮುಂಜಾನೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಯುವತಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪವಾಗಿರುವುದಕ್ಕೆ ಸ್ಪಷ್ಟನೆ ನೀಡಿದ್ದರು. ಜೊತೆಗೆ ತಮ್ಮ ತಂದೆ ತಾಯಿಯನ್ನು ಬೆಂಗಳೂರಿಗೆ ಕರೆ ತರಬೇಕು, ನಾನು ಎಸ್‍ಐಟಿ ಮುಂದೆ ಹೇಳಿಕೆ ನೀಡುವಾಗ ನನ್ನ ಕುಟುಂಬದ ಸದಸ್ಯರು ನನ್ನ ಕಣ್ಣ ಮುಂದೆ ಇರಬೇಕು ಎಂದಿದ್ದಳು.
ವಿಡಿಯೋ ಹೊರ ಬಿದ್ದ ನಂತರ ಯುವತಿಯ ತಂದೆ ತಾಯಿಯವರು ಶನಿವಾರ ಎಸ್‍ಐಟಿ ಮುಂದೆ ಹಾಜರಾಗಿದ್ದಾರೆ.ಹೀಗಾಗಿ ಸಂಜೆ ರಮೇಶ ಜಾರಕಿಹೊಳಿ ಏನು ಹೇಳಲಿದ್ದಾರೆ ಎಂಬುದು ಈ ಪ್ರಕರಣದಲ್ಲಿ ಮಹತ್ವ ಪಡೆದಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement