ಸಚಿನ್‌ ತೆಂಡುಲ್ಕರ್‌ಗೆ ಕೊರೊನಾ ಸೋಂಕು

ಮುಂಬೈ: ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಕೊರೊನಾ ಸೋಂಕುಕಮಡುಬಂದಿದೆ. ಸೋಂಕಿನ ಲಘು ಲಕ್ಷಣಗಳು ಇರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಸಚಿನ್ ತೆಂಡೂಲ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ನನಗೆ ಇಂದು ಕೊರೊನಾ ಲಘು ಲಕ್ಷಣಗಳು ಕಂಡುಬಂದಿದ್ದು, ಕುಟುಂಬದವರ ವರದಿ ನೆಗೆಟಿವ್ ಬಂದಿದೆ. ಸದ್ಯಕ್ಕೆ ನಾನು ನನ್ನ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ.
ಒಂದು ವಾರದ ಹಿಂದೆ ಮುಕ್ತಾಯಗೊಂಡ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ-20 ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಸೇರಿದಂತೆ, ಭಾರತದ ಮಾಜಿ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಯುವರಾಜ್ ಸಿಂಗ್, ಯೂಸೂಫ್ ಪಠಾಣ್, ಮೊಹಮ್ಮದ್ ಕೈಫ್, ವಿನಯ್ ಕುಮಾರ್ ಮೊದಲಾದ ಆಟಗಾರರು ಪಾಲ್ಗೊಂಡಿದ್ದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ನಿಮ್ಮ ಕಾಮೆಂಟ್ ಬರೆಯಿರಿ

advertisement